Monday, November 23, 2009



ಕೃಷಿಮೇಳಗಳೆಂಬ ಪ್ಯಾಷನ್‌ ಶೋಗಳು...


ಉತ್ತರದಿಂದ ಬೀಸುತ್ತಿರುವ ಬಿಡುಗಾಳಿಗೆ ನಮ್ಮ ರೈತರ ಬದುಕು ತತ್ತರಿಸುತ್ತಿದೆ. ನೇಗಿಲು ಹಿಡಿದು ಹೋಲದೊಳು ಹಾಡಬೇಕಿದ್ದ ಉಳುವಾ ಯೋಗಿ ಕಣ್ಣಿರಿನಲ್ಲಿ ಕೈ ತೊಳೆಯುತ್ತಿದ್ದಾನೆ. ಆದರೆ, ನಮ್ಮ ಕೃಷಿ ವಿಶ್ವವಿದ್ಯಾಲಯಗಳು ಪ್ಯಾಷನ್‌ ಶೋಗಳನ್ನು ನಡೆಸುತ್ತಿವೆ ಎಂದರೆ ಬಹಳ ಮಂದಿಗೆ ಅಚ್ಚರಿಯಾಗಬಹುದು.

ವಿಶ್ವವಿದ್ಯಾಲಯಗಳು ನಿಜವಾಗಿಯೂ ‘ಜನತೆ’ಯಿಂದ ದೂರವಿರುತ್ತವೆ ಎಂಬುದಕ್ಕೆ ಉತ್ತಮ ಉದಾಹರಣೆ, ಬೆಂಗಳೂರು ಕೃಷಿ ವಿವಿಯ ಕೃಷಿ ಮೇಳ.

ಸರಿಸುಮಾರು ಒಂದು ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚದಲ್ಲಿ ಅದ್ದೂರಿ ಕೃಷಿ ಮೇಳ ನಡೆಯಿತು. 600ಕ್ಕೂ ಹೆಚ್ಚು ಕೃಷಿ ಸಂಬಂಧಿ ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿತ್ತು. ಯತಾರೀತಿ ಕೃಷಿ ವಿವಿ ವಿದ್ಯಾರ್ಥಿಗಳು, ಸಂಶೋಧಕರ ಕೆಲ ಹೊಸ ತಳಿಗಳ ಪ್ರಾ ಇದ್ದವು. ಇಲ್ಲಿನ ಯಾವೋಂದು ಕೂಡ ಸಾಮಾನ್ಯ ರೈತರಿಗೆ ನಯಾಪೈಸೆ ಉಪಯಕ್ತವಾಗಲಿಲ್ಲ ಎಂದರೆ ನಿಮಗೆ ಖಂಡಿತ ದುಃಖವಾಗದಿರದು.

ಕಂಪೆನಿಗಳ ಬೀಜ ಮಾರಾಟಕಕ್ೆ ಕೃಷಿ ಮೇಳ!

ನೇರಾ-ನೇರ ನಾನು ಹೀಗೆ ಹೇಳ ಹೊರಟರೆ ಅಪಪ್ರಚಾರ ಮಾಡುವ ಸಲುವಾಗಿಯೇ ನಿಂತಂತೆ ಕಾಣಬಹುದು. ಆದರೂ, ಇದು ಸತ್ಯ. ಹಳ್ಳಿಗಾಡಿನ ಕೃಷಿಕ ಹಿನ್ನೆಲೆಯಿಂದ ಬಂದ ನನಗಂತೂ ಆತಂಕವಾಗಿದೆ. ಕೃಷಿ ಮೇಳಗಳು ಆತ್ಮಹತ್ಯೆ, ನೆರೆ-ಬರದ ಭೀಕರತೆಯಲ್ಲಿರುವ ರೈತನ ಬದುಕಿಗೆ ಹೊರ ಭರವಸೆ ಮೂಡಿಸಬೇಕಿತ್ತು. ಆದರೆ, ಕೃಷಿ ಮೇಳವನ್ನು ಒಂದು ದಿನವೀಡಿ ಸುತ್ತಿ ಬಂದರೂ, ಕೃಷಿ ಸಂಬಂಧಿ ಮಾಹಿತಿ ಕನಸಿನ ಮಾತಾಗಿತ್ತು. ಕೇವಲ ಹೈಬ್ರಿಡ್‌ ಬೀಜ, ಗೊಬ್ಬರ ಮಾರಾಟಕಕ್ೆ ಕೃಷಿಮೇಳ ವೇದಿಕೆಯನ್ನು ಒದಗಿಸುತ್ತಿರುವುದು ಗುಟಾ್ಟಗೇನು ಇರಲಿಲ್ಲ.

ದುಬಾರಿ ರೇಶ್ಮೆ ವಸ್ತ್ರಗಳು, ವಿದೇಶಿ ಬೀಜ ಕಂಪೆನಿಗಳ ಬೀಜ ಮತ್ತು ರಸಾಯನಿಕ ಔಷದ ಗೊಬ್ಬರ, ಬೆಲೆ ಸಿಗದೆ ಬೇಜಾರಾದರೆ ತಲೆಗೆ ಹೊಡೆದುಕೊಳ್ಳಲು ಹಗ್ಗದ ಬೆಲೆಯ ಚಪ್ಪಲಿಗಳು, ದುಡಿದು ದಣಿದ ಜೀವಕಕ್ೆ ‘ಬಿಡುಗಡೆ’ ನೀಡುವ ಸೋನಾ ಮಸಾಜ್‌ ಯಂತ್ರ, ಇನ್ನೂ ಬೇಸರವಾದರೆ ಕುಡಿಯಲು ಬಗೆ-ಬಗೆಯ ವೈನ್‌, ದೊಡ್ಡ ರೈತರಿಗೆ ಅಗತ್ಯವಿರುವ ಬೆಳೆ ಬಾಳುವ ಟಾ್ಯಕ್ಟರ್‌, ಡ್ರಿಫ್‌ ಇರಿಗೇಷನ್‌ ಸಾಮಾಗ್ರಿಗಳು.

ಜೊತೆಗೆ ನಮ್ಮ ಹಳ್ಳಿಗಾಡಿನ ಮಹಿಳೆಯರು ತಯಾರಿಸಿದ ಚಕಕ್ಲಿ, ಅಪ್ಪಳ, ಸಂಡಿಗೆ, ಹುರಿಗಡ್ಲೆ ಬೀಜ, ಇದೆಲ್ಲ ನೋಡಿಕೊಂಡು ಸ್ವಲ್ಪ ಮುಂದೆ ಸಾಗಿದರೆ ಕೊನೆಗೆ ರೈತ ಎಂದಿಗೂ ಕೊಳ್ಳಲು ಸಾಧ್ಯವಿಲ್ಲದ ಒಂದೇರಡು ಜೊತೆ ಹೋರಿಗಳು. ಅವುಗಳ ಪಕಕ್ದಲೆ ಮಾಂಸದ ಮೇಕೆ, ಕುರಿ, ಕೋಳಿಗಳು. ಇಂತಹ ಕೃಷಿ ಮೇಳಗಳು ಯಾವ ಘನಂದಾರಿ ಉದ್ದೇಶಗಳಿಗಾಗಿ ನಡೆಸಬೇಕು. ಕೃಷಿ ಮೇಳ ರಂಗೇರಿಸಲು ನಗರದ ಶಾಲಾ-ಕಾಲೇಜು ವಿದಾ್ಯರ್ಥಿಗಳಿಗೆ ಬಿಡುವ ನೀಡಿ ಸುತಾ್ತಡಿಸುವುದು ಒಳ್ಳೆಯದೆ. ಆದರೆ, ರೈತ ಏನು ಮಾಡಬೇಕು ಸಾ್ವಮೀ...

ಬೆಂಗಳೂರಿನ ಶಾಪಿಂಗ್‌ ಮಾಲ್‌ಗಳಿಗೆ ಹೋಗುವ ಮಂದಿಗೆ ಕೃಷಿ ಮೇಳ ಹೊಸ ಹುಮ್ಮಸ್ಸು ನೀಡುತ್ತವೆ. ಇದು ಓ.ಕೆ. ಆದರೆ, ರೈತನ ಹೆಸರಿನಲ್ಲಿ, ಅವನದೇ ಹಣದಲ್ಲಿ ಕೃಷಿ ಮೇಳ ಪಾ್ಯಷನ್‌ಗಾಗಿ ಮಾಡಬೇಕೇ? ಇದರಿಂದ ಗಾ್ರಮಾ್ಯ ಭರತದ ಕೃಷಿಕನಿಗೆ ನಯಾಪೈಸೆ ಉಪಯೋಗವಾಗುವುದಿಲ್ಲ.

ಹಳ್ಳಿಗಾಡಿನ ಜನತೆಗೆ ಕಡಿಮೆ ಮಳೆ ಬೀಳುವ ಒಣ ಭೂಮಿಯಲ್ಲಿ ಬೆಳೆಯ ಬಲ್ಲ ಹೊಸ ತಳಿಗಳು, ಕಣ್ಮರೆಯಾಗುತ್ತಿರುವ ನವಣೆ, ಆರ್ಕ, ಸಜ್ಜೆ, ರಾಗಿ, ಜೋಳ, ತೊಗರಿ, ಹೆಸರು, ಉದ್ದು, ಅವರೆ, ಉರುಳಿಯ ತಳಿ ಉಳಿಸಬೇಕು. ರೈತರಿಗೆ ಇಂತಹ ಅಪರೂಪದ ತಳಿಗಳ ಬೀಜದೊಂದಿಗೆ ಅಗತ್ಯ ಮಾರ್ಗದರ್ಶನ ದೊರೆಯಬೇಕು. ನಿಯಮದಂತೆ ಬೆಂಗಳೂರು- ಧಾರವಾಡ ಕೃಷಿ ವಿಶ್ವ ವಿದಾ್ಯಲಯಗಳ ಮಳಿಗೆಗಳನ್ನು ಹೊರತುಪಡಿಸಿದರೆ ಕೃಷಿ ಮೇಳದಲ್ಲಿ ಕೃಷಿಯ ಗಂಧವು ಗೋಚರಿಸಲಿಲ್ಲ. ಎತ್ತು, ಕತ್ತೆ, ನಾಯಿಗಳ ಪಾ್ಯಷನ್‌ ಶೋ ನಡೆಸಲಿಕಕ್ೆ ಕೃಷಿ ಮೇಳಗಳು ಯಾರಿಗೆ? ಅದು ರೈತರ ಹಣದಲ್ಲಿ ಮೇಳಗಳು ನಡೆಸಬೇಕೇ ಎಂಬ ಪ್ರಶ್ನೆಗಳನ್ನು ಕೃಷಿ ವಿವಿಗಳ ಪಂಡಿತರಿಗೆ ಕೇಳಬೇಡವೇ....

ಕೃಷಿ ರೋಗಗ್ರಸ್ಥ ಉದ್ದಿಮೆ...

ಕೃಷಿ ಮೇಳ ಉದಾ್ಘಟನೆಗೆ ಬಾರಿ ಉತ್ಸಹದಲ್ಲಿ ಧಾವಿಸಿದ್ದ ನಮ್ಮ ಸಚಿವ ಎಸ್‌.ಎ.ರವೀಂದ್ರನಾಥ್‌ಗೆ ರಾಜ್ಯಪಾಲ ಎಚ್‌.ಆರ್‌.ಭರದಾ್ವಜ್‌ ಜಾಡಿಸಿದ್ದು, ಮಾತ್ರ ಮುಟ್ಟಿನೋಡಿಕೊಳ್ಳುವಂತಿತ್ತು. ಬಾ್ಯಟರಾಯನಪುರದ ಶಾಸಕ ಕೃಷ್ಣಬೈರೇಗೌಡ ಕೂಡ ಕೃಷಿ ಸಚಿವ ಮತ್ತು ರಾಜ್ಯ ಸರಕಾರಕಕ್ೆ ಕೆಕಕ್ಮಕಕ್ ಉಗಿದು ಉಪಾ್ಪಕಕ್ಿದ್ದು, ನೆರೆದ ರೈತರಿಗೆ ಸಂತಸ ಕೊಟ್ಟಿದ್ದು, ರವೀಂದ್ರನಾಥ್‌ಗೆ ತಟ್ಟಲಿಲ್ಲ. ಅಧಿಕಾರ ಮತ್ತು ಹಣದ ಥೈಲಿಗಿಳಿದಿರುವ ರವೀಂದ್ರನಾಥ್‌ಗೆ ಸೂಕ್ಷ್ಮಗಳಿದ್ದಿದ್ದರೆ ರಾಜ್ಯದಲ್ಲಿ ರಸಗೊಬ್ಬರಕಾಕ್ಗಿ ರೈತರು ಬೀದಿಗಿಳಿಯುತ್ತಿರಲಿಲ್ಲ.

ಕೃಷಿ ಇಂದು ರೋಗಗ್ರಸ್ಥ ಉದ್ಧಿಮೆ ಎಂದೇ ಸರಕಾರಗಳು ಪರಿಗಣಿಸಿವೆ. ಈ ಹಿನ್ನೆಲೆಯಲ್ಲಿಯೇ ಅತ್ಯಂತ ನಿರ್ಲಕ್ಷಕಕ್ೆ ರೈತರು ಗುರಿಯಾಗಿದಾ್ದರೆ. ಯಾರಿಗೂ ಬೇಡದ ಕೃಷಿಕ ಅನಾಥನ ಸ್ಥಿತಿಯಲ್ಲಿ ಜೀವ ಹಿಡಿದುಕೊಂಡಿದಾ್ದನೆ. ರಾಜ್ಯ 17 ಪ್ರಗತಿಪರ ಕೃಷಿಕರಿಗೆ ಇದೇ ಕೃಷಿ ಮೇಳದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆದರೆ, ಈ ಸಮಾರಂಭಕಕ್ೆ ಆಗಮಿಸಬೇಕಿದ್ದ ಯಡಿಯೂರಪ್ಪ ಸಂಘ ಪರಿವಾರದ ಸರಸಂಚಾಲಕ ಮೋಹನ್‌ ಭಗವತ್‌ರನ್ನು ಭೇಟಿ ಮಾಡಲು ಚಡ್ಡಿ ಹಾಡಿಕೊಂಡು ತೆರಳಿದ್ದರು. ಪ್ರಶಸ್ತಿ ಸ್ವೀಕರಿಸಿ ರೈತನೊಬ್ಬ ಮುಖ್ಯಮಂತ್ರಿಗಳಿಗೆ ತಾರಾಮಾರ ಬೈಯುತ್ತಿದ್ದರೆ ಕೃಷಿ ವಿವಿಯ ಕುಲಪತಿ ಡಾ.ಚಂಗಪ್ಪ ಕರ್ಚಿಫ್‌ ತೆಗೆದುಕೊಂಡು ಮುಖದ ಮೇಲಿನ ನೀರು ಒರೆಸಿಕೊಳ್ಳುತ್ತಿದ್ದರು.

‘ನಮ್ಮ ಭತ್ತ, ರಾಗಿಯ ತಿಂದ..ಕತ್ತೆ ಸೊ...ಮಗ ಎಲ್ಲವನೆಲ್ಲವನೇ’ ಎಂಬ ರೈತಗೀತೆಯ ಧ್ವನಿ ಇಂತಹ ರೈತ ವಿರೋಧಿ ಮೇಳಗಳ ವಿರುದ್ಧ ಮೊಳಗಬೇಡವೇ... ಕೃಷಿ ವಿವಿಗಳು ಹೀಗೆ ಮುಂದುವರಿದರೆ ಕಾಯಿಕೊರಕಗಳಂತೆ ರೈತರ ಜೀವ ಹಿಂಡುವ ಜನರನ್ನು ಯಾರು ನಿಯಂತ್ರಿಸಬೇಕು.


ರಾಮಜೋಗಿಹಳ್ಳಿ ಪ್ರಕಾಶ್

Sunday, November 22, 2009

ಬೆಂಕಿಯಂತ್ತಿದ್ದ ಯಡಿಯೂರಪ್ಪನವರಿಗೆ ಎಂತ ಸ್ಥಿತಿ .........!

"ಪಾಪಾ"
ನಮ್ ರಾಜ್ಯದ ಮುಖ್ಯ ಮಂತ್ರಿ ಯಡಿಯೂರಪ್ಪನವರನ್ನು ನೋಡಿದರೆ ಯಾರಿಗಾದರೂ ಹೀಗನಿಸೇ ಅನಿಸುತ್ತದೆ. ಬಂಡಾಯ ಸಾರಿದ್ದಗಣಿ ಧಣಿ ಮುಂದೆ ಮಂಡಿಯೂರಿ, ಹೈಕಮ್ಯಾಂಡ್
ಹತ್ತಿರ ಗೋಗರೆದು ಕುರ್ಚಿ ಉಳಿಸಿಕೊಂಡು ಬಂದರು ಕಾಟಾ ತಪ್ಪಿಲ್ಲ. ಕುರ್ಚಿಗಾಗಿಪಾಪಾ ತಮ್ಮನೇ ನಂಬಿದ್ದ ಶೋಭಾರನ್ನು, ಪ್ರಧಾನ ಕಾರ್ಯದರ್ಶಿ ಬಳಿಗಾರನ್ನು ಕೈ ಬಿಟ್ಟು ಕಣ್ಣೀರಿಟ್ಟರು ಕೊನೆಗೆ ಹೇಗೋ ಕುರ್ಚಿಉಳಿಯಿತು ಅನೋವಾಗ, ಮತ್ತೆ ಗಣಿ ಭೂತ ಎದುರಾಗಿದೆ.
ಒಂದೆಡೆ ಆಂಧ್ರ ಪ್ರದೇಶ ಸರಕಾರ ತನ್ನ ನೆಲೆಯಿಂದ ಬಳ್ಳಾರಿ ಜಿಲ್ಲೆಗೆ ಹೊಂದಿಕೊಂಡಿರುವ ಪ್ರದೇಶದ ಗಡಿ ಭಾಗದಗಣಿಗಾರಿಕೆಯನ್ನು ಸಿ.ಬಿ..ಗೆ ಒಪ್ಪಿಸಿದೆ, ಇನ್ನೊಂದೆಡೆ ಸುಪ್ರೀಂ ಕೋರ್ಟ್ ಹೈಪವರ್ ಕಮಿಟಿಗೆ ವಹಿಸಿ ವರದಿ ಪಡೆದುಕೊಂಡುಕಠಿಣ ಕ್ರಮದ ಮುನ್ಸೂಚನೆ ನೀಡಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಎರಡು ರಾಜ್ಯಗಳ ಗಡಿ ಒತ್ತುವರಿ ಆಗಿರುವುದ್ದರಿಂದ ತಕ್ಷಣಗಣಿಗಾರಿಕೆ ನಿಲ್ಲಿಸಬೇಕು ಎಂದು ಅದೇಶಿದರೆ ಅನಿವಾರ್ಯವಾಗಿ ಕ್ರಮ ಕೈಗೊಳ್ಳಲೇ ಬೇಕಾಗಬಹುದು ಅಥವಾ ಸಿ.ಬಿ.. ತನಿಖೆಗೆಇಳಿದರೆ ಗೌರವಯುತ
ಸರಕಾರವಾಗಿ ಅಗತ್ಯ ಸಹಕಾರ ನೀಡಲೇ ಬೇಕು. ಎರಡರಲ್ಲಿ ಯಾವುದು ನಡೆದರೂ ಗಣಿ ಉದ್ಯಮಿಗಳುನಷ್ಟ ಅನುಭವಿಸುವುದು ಖಚಿತ. ರಾಜಕೀಯವನ್ನು ಒಂದು ಉದ್ಯಮ ಅಂದುಕೊಂಡಿರುವ ಗಣಿ ದೊರೆಗಳಿಗೆ ತಮ್ಮ ಬುಡಕ್ಕೆ ನೀರುಬಂದಾಗ ರಾಜ್ಯ, ಜನ, ಯಡಿಯೂರಪ್ಪ ಯಾವುದು ಲೆಕ್ಕಕ್ಕಿರುವುದಿಲ್ಲ.
ತಮ್ಮ ಕಣ್ಣು ಹೋದರು ಚಿಂತೆ ಇಲ್ಲ ಎದುರಾಳಿಯ ಎರಡು ಕಣ್ಣು ತೆಗೆಯಬೇಕು ಎಂಬ ಹಠವಾದಿ ಜನಾರ್ದನ ರೆಡ್ಡಿ ಈಗಾಗಲೇಯಡಿಯೂರಪ್ಪನವರಿಗೆ ತಮ್ಮ ಹಠದ ಪರಿಚಯ ಮಾಡಿಸಿದ್ದಾರೆ. ಕಂತೆಗೆ ತಕ್ಕ ಬೊಂತೆ ಎಂಬಂತೆ ರೇಣುಕ ಎಂಬ ನರ್ಸೋಬಳಗೆಣೆಯ, ಬೇಳೂರು ಗೋಪಾಲ ಕೃಷ್ಣ ಎಂಬವರು ತಮ್ಮದೊಂದು ಪಡೆ ಕಟ್ಟಿಕೊಂಡು ಯಡಿಯೂರಪ್ಪನವರ ಬುಡಕ್ಕೆ ಕೆಂಡಹಾಕುತ್ತಿದ್ದಾರೆ. ದುರಂತವೆಂದರೆ ಇದೆ ರೇಣುಕನನ್ನು, ಯಡಿಯೂರಪ್ಪನವರೇ ಬೆಳೆಸಿದು. ಮಾನಸ ಪುತ್ರ ರೇಣುಕ ಹದ್ದಾಗಿದ್ದಾನೆ.
ಸಿ.ಬಿ.. ತನಿಖೆ-ಸುಪ್ರೀಂ ಕೋರ್ಟ್ ಆದೇಶ ಪಾಲನೆ ಯಾವುದಕ್ಕೆ ಕೈ ಇಟ್ಟರು ಯಡಿಯೂರಪ್ಪ ಮಾಜಿಯಾಗುವುದು ಗ್ಯಾರಂಟಿ.
"ಮಾಡಿದ ಪಾಪಾ ಬೆನ್ನಿಗೆ ಬಿದ್ದಾಗ ತಿನ್ನುವ ಬದನೆ ಕಾಯಿ ದೆವ್ವ ಆಗುತ್ತಂತೆ" ಒಂದು ಕಾಲದಲ್ಲಿ ಹಣವಿದ್ದ ಗಣಿಧಣಿಗಳಿಗೆ ಮಣೆಹಾಕಿದಕ್ಕೆ ಯಡಿಯೂರಪ್ಪ ಪ್ರಾಯಾಶ್ಚಿತ ಪಡಲೇ ಬೇಕು.
ಹಿಂದೆ ರಾಮಕೃಷ್ಣ ಹೆಗಡೆ, ದೇವರಾಜ ಅರಸು ತಾವು ಮುಖ್ಯಮಂತ್ರಿಯಾಗಲು ಹಣವಂತರ ನೆರವು ಪಡೆದುಕೊಂಡಿದರು. ಆದರೆ, ಹಣ ಮತ್ತು ಅಧಿಕಾರ ಒಂದೆಡೆ ಕೆಂದ್ರಿಕೃತವಾಗಬರದು ಎಂಬ ತತ್ವ ಪಾಲಿಸಿಕೊಂಡು ಬಂದಿದ್ದರು.
ಯಡಿಯೂರಪ್ಪನವರಿಗೆ ಯಾರು ಸಲಹೆ ಕೊಟ್ಟರೋ ಗೊತ್ತಿಲ್ಲ. ದಡ್ದರಂತೆ ಗಣಿಧಣಿಗಳನ್ನು ಹತ್ತಿರಕ್ಕೆ ತಂದುಕೊಂಡು ಈಗಕ್ಯಾಮರಗಳೆದುರು
ಜೋಕರ್ ರೀತಿ ನಗುತ್ತಾರೆ. ನಗು ನೋಡಿದರೆ ಪಾಪಾ ಅನಿಸುತ್ತದೆ.
ರಾಜ್ಯದ ಮುಖ್ಯಮಂತ್ರಿಗೆ ಸ್ಥಿತಿ ಬರಬಾರದಿತ್ತು.
ಏನಾದರು ಹಾಳಾಗಲಿ ಪ್ರಜಾಪ್ರಭುತ್ವದಂತೆ ಐದು ವರ್ಷ ಸರಕಾರ ಉಳಿದರೆ ಸಾಕು ಎಂದು ಜನ ನಿಟ್ಟುಸಿರು ಬಿಡುತ್ತಿದ್ದಾರೆ.
ಯಡಿಯೂರಪ್ಪ
ಗಣಿ ಸಂಪತ್ತು ಅಡವು ಮಾಡಿಯಾದರೂ ಜನರ ಆಸೆಯಂತೆ ಸರಕಾರ ಉಳಿಸಿ ಕೊಳ್ಳುತಾರೋ ಅಥವಾ ರಾಜಕೀಯತಂತ್ರಗಾರಿಕೆ ಮೆರೆದು ತೆರೆ ಮರೆಯಲ್ಲಿ ಗಣಿಧಣಿಗಳನ್ನು ಮಟ್ಟ ಹಾಕುತ್ತಾರೋ ಎಂಬುದೇ ಕದನ ಕುತೂಹಲ
ಎಲ್ಲದಕ್ಕೂ ಕಾಲನೆ ಉತ್ತರ ಹೇಳಬೇಕು ............ !
ಬೆಂಕಿಯಂತ್ತಿದ್ದ ಯಡಿಯೂರಪ್ಪನವರಿಗೆ ಎಂತ ಸ್ಥಿತಿ .........!
ಬಿತ್ತಿಯೂ ಬೆಳೆ ಕಾಣದೆ ಅಳುವವರ
ಕಣ್ಣೀರು ಒರೆಸಬಾರದೇ....

ಪೆನ್ನಿನ ಧ್ವನಿ ಪ್ರಾಣವೆನಗೆ

ಪ್ರಜೆಗೆ ನಾನು ಅರ್ಪಿತ,

ಹೋರಾಟವೇ ಡೈರಕ್ಷನ್

ಹಾಡು ನನಗೆ ಆಕ್ಸಿಜನ್
ಎಂಬ ಕವಿವಾಣಿ ನಿತ್ಯ ನೂತನ.

ಪತ್ರಿಕೆಗೆ ಲೇಖನಿಯೇ ಜೀವಾಳ. ಲೇಖನಿಯನ್ನು ಉಳ್ಳವರು ತಮಗೆ ಬೇಕಾದರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಆರಂಭದಿಂದಲೂ ಪತ್ರಿ
ಕಾರಂಗ ನಿಜವಾಗಿಯೂ "ಜನತೆ" ಪರವಾಗಿತ್ತು ಅವರಬೇಕು-ಬೇಡಗಳನ್ನು ಪ್ರತಿಫಲಿಸುತ್ತಿದ್ದವು. ಆದರೆ, ಇಂದು ಪತ್ರಿಕಾರಂಗ ತನ್ನ ಮೂಲನೆಲೆಯಿಂದ ದಿಕ್ಕು ಬದಲಿಸಿ, ಮಗ್ಗಲು ತಿರುಗಿಸಿದೆ. ಈಗ ಅದು ಉದ್ಯಮವಾಗಿದೆ. ಇಲ್ಲಿಯೂ ಹಿಡಿ ಧಾನ್ಯವ ಬಿತ್ತಿ ಖಂಡುಗ ಬೆಳೆಯಬೇಕೆಂಬ ಹೆಬ್ಬಯಕೆ ಮನೆಮಾಡಿದೆ. ಪ್ರಕೃತಿ ಸಹಜ ಬಯಕೆಗಳನ್ನು ತೀರಿಸಬಹುದು, ಆದರೆ, ಅಂಗ-ಅಂಗಗಳಿಗೆಲ್ಲ ಹೊತ್ತಿಕೊಂಡ ಇಂಗದ ದಾಹ ತೀರುವುದೆಂತೂ?
ಲೇಖನಿಯನ್ನು ಕುಳವಾಗಿಯೂ, ಖಡ್ಗವಾಗಿಯೂ ಮಾತ್ರವಲ್ಲ, ಚಿಕಿತ್ಸೆ ಮಾಡುವಶಸ್ತ್ರ- ಅಸ್ತ್ರವಾಗಿಯೂ ಬಳಕೆ ಮಾಡಬಹುದು. ನಾವು ಯಾವುದನ್ನು ಎಷ್ಟುಪ್ರಮಾಣದಲ್ಲಿ ಯಾರಿಗೆ, ಹೇಗೆ ಮತ್ತು ಯಾವ ಕಾರಣಗಳಿಗೆ ಬಳಕೆಮಾಡುತ್ತೇವೆಂಬುದು ಬಹಳ ಮುಖ್ಯ. ಗ್ರಾಮ್ಯಾ ಸೊಗಡಿನ ಚಿತ್ರದುರ್ಗ ಜಿಲ್ಲೆಯಲ್ಲಿಪತ್ರಿಕೆಯೊಂದನ್ನು ಇವತ್ತಿನ ಸಂದರ್ಭದಲ್ಲಿ ತರಬೇಕೆಂದು ಹಂಬಲಿಸುವುದುಕನಸಿರುವವರಿಗೆ ಮಾತ್ರ ಸಾಧ್ಯ ಎಂಬುದು ನನ್ನ ಅಚಲ ನಂಬಿಕೆ. ಕನಸಿದ್ದ ಮಾತ್ರಕ್ಕೆ ಅದು ವಾಸ್ತವಕ್ಕೆ ಇಳಿಯುವುದು ಸಾಧ್ಯವೆಂಬಪ್ರಶ್ನೆ ಏಳುತ್ತದೆ.
ಅದೇನೆ ಇದ್ದರೂ, ಪತ್ರಿಕೆ, ಪತ್ರಿಕಾರಂಗ ಮತ್ತು ಪತ್ರಿಕೋದ್ಯಮದ ಗಂಧದ ಸೆಳೆತಕ್ಕೆ ಸಿಕ್ಕು ಹಿಡಿಮುಷ್ಠಿಯೊಳಗೆ ಪ್ರಪಂಚವನ್ನೆಹಿಡಿದುಕೊಳ್ಳವ ಹುಂಬ ಪ್ರಯತ್ನವೇಕಾಗಬಾದೇಕೆ? ಆದರೂ, ಪ್ರಯತ್ನಕ್ಕೆ ಯಶಸ್ಸು ಇದೆ. ಅದು ನಮ್ಮ ನಡಿಗೆಯ ಮೇಲೆ ನಿಂತಫಲ.
ಇಂದು ಪತ್ರಿಕೋದ್ಯಮ ಅತ್ಯಂತ ವಿಸ್ತಾರವಾಗಿ ಆವರಿಸಿಕೊಂಡಿದೆ. ಏಷ್ಟೇ ಆಳ-ಅಗಲಕ್ಕೆ ಆವರಿಸಿಕೊಂಡಿದ್ದರೂ, ಅದು ಪ್ರಸ್ತುತಕೇವಲ ಶೇ.5ರಷ್ಟು ಜನತೆಯ ಭಾವನೆ-ಮತ್ತವರ ತುಮುಲ, ಬೇಕು-ಬೇಡಗಳನ್ನು ಮಾತ್ರ ಪ್ರಚುರ ಪಡಿಸುತ್ತದೆ.
ನಮ್ಮ ಬಡ ಭಾರತದಲ್ಲಿ ಇಂದಿಗೂ ಎಲೆಮರೆಯ ಕಾಯಿಯಂತೆ ತಮ್ಮ ಜೀವನವನ್ನೇ ಗಂಧದಂತೆ ತೇಯುತ್ತಿರುವ ಹಳ್ಳಿಗಾಡಿನಶೇ.70ರಷ್ಟು ಜನಸಾಮಾನ್ಯ ಬದುಕು-ಭವಣೆಗಳನ್ನು ಪ್ರತಿಕೋದ್ಯಮ ಪರಿಗಣಿಸಲೇ ಇಲ್ಲ. ಸ್ವಾತಂತ್ರ ಬಂದು ಆರು ದಶಕಗಳೇಕಳೆದರೂ ಇಂದಿಗೂ ನಮ್ಮ ಹಳ್ಳಿಗಾಡಿನ ಜನ ಹಸಿವಿಂದ ಸಾಯುತ್ತಿದ್ದಾರೆ. ಗ್ರಾಮ್ಯಾ ಭಾರತದ ಬಹುದೊಡ್ಡ ರೈತ ಸಮೂಹ ದೇಶದಬೆನ್ನೆಲುಬಾಗಿರುವ ರೈತರು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಸಾಲು-ಸಾಲಾಗಿ ಶರಣಾಗುತ್ತಿದ್ದಾರೆ.
ಸರಕಾರದ ಮಾಹಿತಿಯಂತೆ 1997ರಿಂದ 2005 ವರೆಗೆ ನಮ್ಮ ದೇಶದಲ್ಲಿ 1.50 ಲಕ್ಷಕ್ಕೂ ಅಧಿಕ ಮಂದಿ ರೈತರು ಸಾವಿಗೆಶರಣಾಗಿದ್ದಾರೆ. ಇದು ನಮ್ಮ ಮಾಧ್ಯಮಗಳಿಗೆ ಸುದ್ಧಿಯಾಗಲಿಲ್ಲ. ಹಳ್ಳಿಗಾಡಿನ ಸಮೂಹ ಕೇವಲ 5 ವರ್ಷಗಳಿಗೂಮ್ಮೆ ಬರುವಚುನಾವಣೆಗಳಲ್ಲಿ ಮಾತ್ರ ಬೆದರು ಬೊಂಬೆಗಳಂತೆ ಇರಬೇಕು ಅಷ್ಟೇ. ಉಳಿದಂತೆ ಅವರು ನಿರ್ಜಿವ.
ಇಂತಹ ದೌರ್ಭಗ್ಯ ದಮನಿತ ಬಡ-ರೈತ, ಕೃಷಿ ಕೂಲಿ ಕಾರ್ಮಿಕರ ಒಳಕುದಿತಕ್ಕೆ ಪತ್ರಿಕೆ, ಮಾಧ್ಯಮ, ಲೇಖಗಳ ಧ್ವನಿಯಾಗುವುದುಅವುಗಳ ಜವಾಬ್ದಾರಿಯಾಗಿತ್ತು. ಆದರೆ, ಹಳ್ಳಿಗಾಡಿನ ಸಮೂಹವಿಂದು ಮಾಧ್ಯಮಗಳಲ್ಲಿ ಕೇವಲ ನಿಧನ ವಾರ್ತೆ ಮತ್ತು ಅದರಮಗ್ಗುಲಲ್ಲೆ ಬರುವ ಶ್ರದ್ಧಾಂಜಲಿಗೆ ಸೀಮಿತಗೊಂಡಿವೆ. ಪತ್ರಿಕೆ ಯಾರಿಗೆ-ಏನ್ನನ್ನು ತಲುಪಿಸಬೇಕು ಎಂಬ ದಿಕ್ಸೂಚಿ ಅಗತ್ಯ.

ರಾಜ್ಯದ ಉತ್ತರ ಕರ್ನಾಟಕದ 15 ಜಿಲ್ಲೆಗಳ 200ಕ್ಕೂ ಹೆಚ್ಚು ಮಂದಿ ನೆರೆ ಹಾವಳಿಯಿಂದ ಅಸುನಿಗಿದ್ದಾರೆ. 4ಲಕ್ಷಕ್ಕೂ ಅಧಿಕ ಮಂದಿಮನೆ-ಮಠ ಕಳೆದುಕೊಂಡು ಬೀದಿಯಲ್ಲಿ ನಿಂತಿದ್ದಾರೆ. ಸಾವಿರಾರು ಹಳ್ಳಿಗಳು-ಲಕ್ಷಾಂತರ ಎಕರೆಯಲ್ಲಿದ್ದ ಬೆಳೆ ಸಂಪೂರ್ಣನಾಶವಾಗಿದೆ. ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದ್ದ ಸರಕಾರ ನನ್ನಿಂದ ಏನು ಸಾಧ್ಯವಿಲ್ಲ ಎಂದು ಭೀಕ್ಷೆಗೆ ನಿಲ್ಲುತ್ತದೆ. ನೆರೆಯವೇಗದಲ್ಲೆ ಸರಕಾರ ಭಿನ್ನಮತದ ಬಿಕ್ಕಟ್ಟಿಂದ ಆತಂಕಕ್ಕೆ ಸಿಲುಕತ್ತದೆ. ಆದರೆ, ನಮ್ಮ ಮಾಧ್ಯಮಗಳು ನೆರೆಯ ಸಂತ್ರಸ್ತರನ್ನು ಬಿಟ್ಟುಮುಖ್ಯಮಂತ್ರಿ, ಸಚಿವರು, ಶಾಸಕರುಗಳ ಮನೆಯ ಕಾವಲು ನಾಯಿಗಳಾಗಿ ನಿಲ್ಲುತ್ತವೆ. ಅವರ ಮನೆಗಳಿಗೆ ಬರುವ ಹಲ್ಲಿ, ಹಾವು, ಬೆಕ್ಕುಗಳು ಮತ್ತು ಅವು ಬಂದ ರಾಶಿ-ನಕ್ಷತ್ರ, ಶಕುನಗಳ ಪರಾಮರ್ಶೆಗೆ ನಿಲ್ಲುತ್ತವೆ. ಅದು ಅತ್ಯಂತ ಮಹತ್ವದ ಸುದ್ಧಿಯಾಗುತ್ತವೆ. ಇದು ನಮ್ಮ ಆಧ್ಯತೆಯಾಗಬೇಕೇ?
ಮುಖ್ಯವಾಹಿಯಲ್ಲಿಂದು ಹೂವಿನಷ್ಟೇ ಪರಿಮಳ ಮತ್ತು ಅಷ್ಟೇ ಆಯಸ್ಸಿನ ಹಲವಾರು ಪತ್ರಿಕೆಗಳು ಬಂದು-ಹೋಗುತ್ತಿವೆ. ಇಂತಹವುಗಳ ಸಾಲಿಗೆ ನಾವು ಸೇರುವುದು ಕಷ್ಟದ ಕೆಲಸವಲ್ಲ. ಇವೆಲ್ಲಕ್ಕಿಂತ ನಾವು ಭಿನ್ನ ಎಂಬುದಾದರೆ ನಮ್ಮ ಆಧ್ಯತೆ ಏನುಎಂಬ ಪ್ರಶ್ನೆ ಹಾಕಿಕೊಳ್ಳಬೇಕು. ದಾರಿಯಲ್ಲಿ ಕಣ್ಣು ಬಿಡಬೇಕು. ಆರಳಿಸಿ ನಿಂತು ಮುಂದೆ ಸಾಗಬೇಕು.
ದಿ ಹಿಂದೂಪತ್ರಿಕೆಯ ಕೃಷಿ ವಿಭಗದ ಮುಖ್ಯ ಅಂಕಣಕಾರ ಪಿ.ಸಾಯಿನಾಥ್ ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕಲಿತರೂ, ಹಳ್ಳಿಗಾಡಿನ ಗ್ರಾಮ್ಯಾ ಸೊಗಡಿನ ಸಗಣಿ-ಗಂಜಳ ಮಧ್ಯೆದ ಬದುಕಿನ ಪರಿಮಳ ಗ್ರಹಿಸಿದವರು.
ರೈತರ ಆತ್ಮಹತ್ಯೆ ಹಿಂದಿನ ನಗ್ನ ಸತ್ಯಗಳನ್ನು ದಂತ ಗೋಪುರದೊಳಗಿದ್ದ ಮಾಧ್ಯಮಗಳಿಗೆ ಬಿಚ್ಚಿಟ್ಟ ದೀಮಂತ ವ್ಯಕ್ತಿ. ಅವರ ಲೇಖನನೀವು ಬಿತ್ತಿದ್ದೀರಿ, ಅದಕ್ಕೀಗ ಅಳುತ್ತೀರಿ ಎಂಬ ಶೀರ್ಷಿಕೆ ಇದೇ ಸಂದರ್ಭದಲ್ಲಿ ನೆನಪಾಗುತ್ತದೆ. ಬಿತ್ತಿಯೂ ಬೆಳೆಕಾಣದೆ ಅಳುವವರಕಣ್ಣೀರು ಒರೆಸಲು ನಾವು ಮುಂದಾಗಬೇಡವೇ? ಅವರು ನಮ್ಮ ಆದ್ಯತೆ ಏಕಾಗಬಾರದು...

ರಾಮಜೋಗಿಹಳ್ಳಿ ಪ್ರಕಾಶ

ನನ್ನ ಸಹೋದ್ಯೋಗಿ ಮಿತ್ರ ರಾಮಜೋಗಿಹಳ್ಳಿ ಪ್ರಕಾಶ್
ರೈತರ ಬಗ್ಗೆ ತಮ್ಮ ಹೊಟ್ಟೆಯಲ್ಲಿದ್ದ ಕಾಳಜಿಯನ್ನು
ಕೀ ಬೋರ್ಡ್ ಮೂಲಕ ಕಂಪ್ಯೂಟರ್ ಗೆ ತುರುಕಿದ್ದಾರೆ.

ಅದರ ಯತಾವತ್ತು ರೂಪ ಮೇಲಿದೆ.
ಉಮೇಶ್ ಕೋಲಿಗೆರೆ