Wednesday, December 30, 2009

ಈ ನರ್ಸಮ್ಮ ಯಲ್ಲೋಗಿದರೋ......?




"ಅತ್ತೆ ಸತ್ತ ಆರು ತಿಂಗಳಿಗೆ ಸೊಸೆ ಕಣ್ಣಲ್ಲಿ ನೀರು" ಬಂತಂತೆ
ಈ ಗಾಧೆ ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿದೆ. ಅದು ಈಗಿನ ಪರಿಸ್ಥಿತಿಗೆ ಸರಿಯಾಗಿ ಹೊಂದಿಕೊಳ್ಳುತ್ತೆ. ನೆರೆಯ ರಾಜ್ಯವಾದ ಆಂಧ್ರ ಪ್ರದೇಶದಲ್ಲಿ ಕಳೆದ 4-5 ತಿಂಗಳಿನಿಂದ ರಾಜ್ಯ ವಿಭಜನೆಯದೆ ಸುದ್ದಿ. ಮೊದಲು ಚಂದ್ರಶೇಖರ್ ನೇತ್ರತ್ವದಲ್ಲಿ ಪ್ರತ್ಯೇಕ ತೆಲಂಗಾಣಕ್ಕಾಗಿ ನಡೆದ ಹೋರಾಟ ದೊಡ್ಡ ಸುದ್ದಿ ಮಾಡಿತ್ತು. ಚಂದ್ರಶೇಖರ್ ಉಪವಾಸ ಮಾಡಿದ್ದರಿಂದ ಉಂಟಾದ ಕೋಲಾಹಲದಿಂದ ಪಾರಾಗಲು ಕೇಂದ್ರ ಸರಕಾರ ತೆಲಂಗಾಣವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸುವ ಭರವಸೆ ನೀಡಿತ್ತು, ಮಾರನೆಯ ದಿನವೇ ಆಂಧ್ರದ ಒಕ್ಕೂಟಕ್ಕಾಗಿ ರಾಯಲಸಿಮಾ ಮತ್ತು ಆಂಧ್ರದ ಕರಾವಳಿ ಭಾಗದಲ್ಲಿ ಪ್ರತಿಭಟನೆಗಳು ಆರಂಭವಾದವು.
 ಒಕ್ಕೂಟ ರಾಜ್ಯದ ವಕ್ತಾರರು ಚಂದ್ರಶೇಖರ್ ನೇತ್ರತ್ವದಲ್ಲಿ ತೆಲಂಗಾಣಕ್ಕಾಗಿ ಪ್ರತಿಭಟನೆಗಳು ನಡೆಯುವಾಗ ಕನಿಷ್ಠ ಪ್ರಮಾಣದ ವಿರೋಧವನ್ನು ವ್ಯಕ್ತಪಡಿಸಿರಲಿಲ್ಲ. ಕೇಂದ್ರ ಸರ್ಕಾರ ತೆಲಂಗಾಣವನ್ನು ಪ್ರತ್ಯೇಕ ರಾಜ್ಯ ಘೋಶಷಣೆ ಮಾಡುತ್ತಿದ್ದ ಹಾಗೆ ನಿದ್ದೆಯಿಂದೆದ್ದರು. ಮತ್ತೆ ಜಿದ್ದಾಜಿದ್ದಿನ ಹೋರಾಟಗಳು, ಪ್ರತಿಷ್ಠೆಗಳು ಸಾಂಗವಾಗಿ ನಡೆದವು. ಇಕ್ಕಟ್ಟಿನಲ್ಲಿ ಸಿಲುಕಿದ್ದು ಮಾತ್ರ ಕೇಂದ್ರ ಸರಕಾರ, ತೊಂದರೆ ಅನುಭವಿಸಿದು ಜನ. ತೆಲಂಗಾಣ ಭಾಗದ ಸಚಿವರು ಕೂಡ ರಾಜೀನಾಮೆ ನೀಡಿ ಹೋರಾಟಕ್ಕೆ ಬೆಂಬಲಿಸಿದ್ದು ವಿಪರ್ಯಾಸ. ಅವರೇ ನಡೆಸುವ ಸರಕಾರ ಜನರ ಅಶೋತ್ತರಗಳಿಗೆ ಸ್ಪಂದಿಸಿಲ್ಲ ಎಂದು ಸಚಿವರು ನೇರವಾಗಿ ಒಪ್ಪಿಕೊಂಡ ಹಾಗೆ ಆಯಿತು.
ಇನ್ನು ಕರ್ನಾಟಕ ರಾಜ್ಯಕ್ಕೆ ಬಂದರೆ. ಇಲ್ಲಿಯೂ ಅಂತದೆ ಸೋಮಾರಿ ಜನಗಳಿದ್ದಾರೆ. ಪಾಪ 30 ವರ್ಷ ವಿರೋಧ ಪಕ್ಷದ ನಾಯಕನಾಗಿ ಗಂಟಲು ಹರಿದುಕೊಂಡು ಕುಮಾರ ಸ್ವಾಮಿ ದಯದಿಂದ ಅಪರೂಪಕ್ಕೆ ಅಧಿಕಾರ ಸಿಕ್ಕಿ ಮುಖ್ಯಮಂತ್ರಿಯಾದರೆ ನೆಮ್ಮದಿಯಾಗಿ ಮಜಾ ಮಾಡುವ ಹಾಗಿಲ್ಲ. ಒಂದೆಡೆ ರೆಡ್ಡಿಗಳು, ಇನೊಂದೆಡೆ  ಈಶ್ವರಪ್ಪ. ಇವರ್ನೆಲ್ಲಾ ತಪ್ಪಿಸಿಕೊಂಡು ಹೇಗೋ ಹೆಗುತ್ತಿದ್ದರೆ ಈ ರೇಣುಕ ಒಬ್ಬ ನನ್ದೆಲ್ಲಿಕ್ಕಲಿ ಅಂತ ಬರುತಾನೆ. ಹಾಳಾಗಿ ಹೋಗಲಿ ಅಂತ ಅವನಿಗೂ ಒಂದು ಸಚಿವ ಸ್ಥಾನ ಕೊಟ್ಟು ಕೈ ತೊಳೆದುಕೊಂಡರೆ. ಅದೆಲ್ಲಿದ್ದಲೋ ಈ ನರ್ಸಮ್ಮ ದುತ್ತೆಂದು ಕಾಣಿಸಿಕೊಂಡು ರೇಣುಕನನ್ನ ಕೈ ಬಿಡಿ ಎಂದು ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸ್ತೇನೆ ಅಂತ ಕುತವಳೇ. ಸದ್ಯಕ್ಕೆ ಯಡಿಯೋರಪ್ಪನವರ ಅದೃಷ್ಟ ಚನ್ನಾಗಿತು. ಕನ್ನಡದ ಮೇರು ನಟ ವಿಷ್ಣುವರ್ಧನ್ ನಿಧನರಾದರು ಜನರ ಗಮನವೆಲ್ಲ ಆ ಕಡೆ ಹೋಯಿತು ಇಲ್ಲವಾದರೆ ನರ್ಸಮ್ಮ ಬಿಜೆಪಿ ಸರ್ಕಾರದ ಮರ್ಯಾದೆಯನ್ನು ಮೂರೂ ಕಾಸಿಗೆ ಕಳಿತ್ತಿದ್ಲು. 
ಇದೆಲ್ಲ ಏನೇ ಇರ್ಲಿ ಜನ ಮಾತ್ರ ಅತ್ತೆ ಸತ್ತ ಆರು ತಿಂಗಳಿಗೆ ಸೊಸೆ ಕಣ್ಣಲ್ಲಿ ನೀರು ಬಂತು ಎಂಬ ಗಾಧೆಯಂತೆ ಎಲ್ಲ ಮುಗಿದಮೇಲೆ ಎದಿದ್ದಾರೆ. ರೇಣುಕನಿಗೆ ಸಚಿವ ಸ್ಥಾನ ನೀಡೋದು 4  ದಿನ ಮೊದಲೇ ಮುಖ್ಯಮಂತ್ರಿ ಖಚಿತಪಡಿಸಿದ್ರು, ಆಗಲೇ ಎದ್ದಿದರೆ ಇಷ್ಟೆಲ್ಲಾ ಪಜಿತಿಯೇ ಇರುತ್ತಿರಲಿಲ್ಲ. 
ನರ್ಸಮ್ಮ, ನಂದೀಶ್ ರೆಡ್ಡಿ, ವಿಶ್ವನಾಥ್ ಎಲ್ಲಾ ಯಲ್ಲೋಗಿದರೋ......?

Monday, November 23, 2009



ಕೃಷಿಮೇಳಗಳೆಂಬ ಪ್ಯಾಷನ್‌ ಶೋಗಳು...


ಉತ್ತರದಿಂದ ಬೀಸುತ್ತಿರುವ ಬಿಡುಗಾಳಿಗೆ ನಮ್ಮ ರೈತರ ಬದುಕು ತತ್ತರಿಸುತ್ತಿದೆ. ನೇಗಿಲು ಹಿಡಿದು ಹೋಲದೊಳು ಹಾಡಬೇಕಿದ್ದ ಉಳುವಾ ಯೋಗಿ ಕಣ್ಣಿರಿನಲ್ಲಿ ಕೈ ತೊಳೆಯುತ್ತಿದ್ದಾನೆ. ಆದರೆ, ನಮ್ಮ ಕೃಷಿ ವಿಶ್ವವಿದ್ಯಾಲಯಗಳು ಪ್ಯಾಷನ್‌ ಶೋಗಳನ್ನು ನಡೆಸುತ್ತಿವೆ ಎಂದರೆ ಬಹಳ ಮಂದಿಗೆ ಅಚ್ಚರಿಯಾಗಬಹುದು.

ವಿಶ್ವವಿದ್ಯಾಲಯಗಳು ನಿಜವಾಗಿಯೂ ‘ಜನತೆ’ಯಿಂದ ದೂರವಿರುತ್ತವೆ ಎಂಬುದಕ್ಕೆ ಉತ್ತಮ ಉದಾಹರಣೆ, ಬೆಂಗಳೂರು ಕೃಷಿ ವಿವಿಯ ಕೃಷಿ ಮೇಳ.

ಸರಿಸುಮಾರು ಒಂದು ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚದಲ್ಲಿ ಅದ್ದೂರಿ ಕೃಷಿ ಮೇಳ ನಡೆಯಿತು. 600ಕ್ಕೂ ಹೆಚ್ಚು ಕೃಷಿ ಸಂಬಂಧಿ ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿತ್ತು. ಯತಾರೀತಿ ಕೃಷಿ ವಿವಿ ವಿದ್ಯಾರ್ಥಿಗಳು, ಸಂಶೋಧಕರ ಕೆಲ ಹೊಸ ತಳಿಗಳ ಪ್ರಾ ಇದ್ದವು. ಇಲ್ಲಿನ ಯಾವೋಂದು ಕೂಡ ಸಾಮಾನ್ಯ ರೈತರಿಗೆ ನಯಾಪೈಸೆ ಉಪಯಕ್ತವಾಗಲಿಲ್ಲ ಎಂದರೆ ನಿಮಗೆ ಖಂಡಿತ ದುಃಖವಾಗದಿರದು.

ಕಂಪೆನಿಗಳ ಬೀಜ ಮಾರಾಟಕಕ್ೆ ಕೃಷಿ ಮೇಳ!

ನೇರಾ-ನೇರ ನಾನು ಹೀಗೆ ಹೇಳ ಹೊರಟರೆ ಅಪಪ್ರಚಾರ ಮಾಡುವ ಸಲುವಾಗಿಯೇ ನಿಂತಂತೆ ಕಾಣಬಹುದು. ಆದರೂ, ಇದು ಸತ್ಯ. ಹಳ್ಳಿಗಾಡಿನ ಕೃಷಿಕ ಹಿನ್ನೆಲೆಯಿಂದ ಬಂದ ನನಗಂತೂ ಆತಂಕವಾಗಿದೆ. ಕೃಷಿ ಮೇಳಗಳು ಆತ್ಮಹತ್ಯೆ, ನೆರೆ-ಬರದ ಭೀಕರತೆಯಲ್ಲಿರುವ ರೈತನ ಬದುಕಿಗೆ ಹೊರ ಭರವಸೆ ಮೂಡಿಸಬೇಕಿತ್ತು. ಆದರೆ, ಕೃಷಿ ಮೇಳವನ್ನು ಒಂದು ದಿನವೀಡಿ ಸುತ್ತಿ ಬಂದರೂ, ಕೃಷಿ ಸಂಬಂಧಿ ಮಾಹಿತಿ ಕನಸಿನ ಮಾತಾಗಿತ್ತು. ಕೇವಲ ಹೈಬ್ರಿಡ್‌ ಬೀಜ, ಗೊಬ್ಬರ ಮಾರಾಟಕಕ್ೆ ಕೃಷಿಮೇಳ ವೇದಿಕೆಯನ್ನು ಒದಗಿಸುತ್ತಿರುವುದು ಗುಟಾ್ಟಗೇನು ಇರಲಿಲ್ಲ.

ದುಬಾರಿ ರೇಶ್ಮೆ ವಸ್ತ್ರಗಳು, ವಿದೇಶಿ ಬೀಜ ಕಂಪೆನಿಗಳ ಬೀಜ ಮತ್ತು ರಸಾಯನಿಕ ಔಷದ ಗೊಬ್ಬರ, ಬೆಲೆ ಸಿಗದೆ ಬೇಜಾರಾದರೆ ತಲೆಗೆ ಹೊಡೆದುಕೊಳ್ಳಲು ಹಗ್ಗದ ಬೆಲೆಯ ಚಪ್ಪಲಿಗಳು, ದುಡಿದು ದಣಿದ ಜೀವಕಕ್ೆ ‘ಬಿಡುಗಡೆ’ ನೀಡುವ ಸೋನಾ ಮಸಾಜ್‌ ಯಂತ್ರ, ಇನ್ನೂ ಬೇಸರವಾದರೆ ಕುಡಿಯಲು ಬಗೆ-ಬಗೆಯ ವೈನ್‌, ದೊಡ್ಡ ರೈತರಿಗೆ ಅಗತ್ಯವಿರುವ ಬೆಳೆ ಬಾಳುವ ಟಾ್ಯಕ್ಟರ್‌, ಡ್ರಿಫ್‌ ಇರಿಗೇಷನ್‌ ಸಾಮಾಗ್ರಿಗಳು.

ಜೊತೆಗೆ ನಮ್ಮ ಹಳ್ಳಿಗಾಡಿನ ಮಹಿಳೆಯರು ತಯಾರಿಸಿದ ಚಕಕ್ಲಿ, ಅಪ್ಪಳ, ಸಂಡಿಗೆ, ಹುರಿಗಡ್ಲೆ ಬೀಜ, ಇದೆಲ್ಲ ನೋಡಿಕೊಂಡು ಸ್ವಲ್ಪ ಮುಂದೆ ಸಾಗಿದರೆ ಕೊನೆಗೆ ರೈತ ಎಂದಿಗೂ ಕೊಳ್ಳಲು ಸಾಧ್ಯವಿಲ್ಲದ ಒಂದೇರಡು ಜೊತೆ ಹೋರಿಗಳು. ಅವುಗಳ ಪಕಕ್ದಲೆ ಮಾಂಸದ ಮೇಕೆ, ಕುರಿ, ಕೋಳಿಗಳು. ಇಂತಹ ಕೃಷಿ ಮೇಳಗಳು ಯಾವ ಘನಂದಾರಿ ಉದ್ದೇಶಗಳಿಗಾಗಿ ನಡೆಸಬೇಕು. ಕೃಷಿ ಮೇಳ ರಂಗೇರಿಸಲು ನಗರದ ಶಾಲಾ-ಕಾಲೇಜು ವಿದಾ್ಯರ್ಥಿಗಳಿಗೆ ಬಿಡುವ ನೀಡಿ ಸುತಾ್ತಡಿಸುವುದು ಒಳ್ಳೆಯದೆ. ಆದರೆ, ರೈತ ಏನು ಮಾಡಬೇಕು ಸಾ್ವಮೀ...

ಬೆಂಗಳೂರಿನ ಶಾಪಿಂಗ್‌ ಮಾಲ್‌ಗಳಿಗೆ ಹೋಗುವ ಮಂದಿಗೆ ಕೃಷಿ ಮೇಳ ಹೊಸ ಹುಮ್ಮಸ್ಸು ನೀಡುತ್ತವೆ. ಇದು ಓ.ಕೆ. ಆದರೆ, ರೈತನ ಹೆಸರಿನಲ್ಲಿ, ಅವನದೇ ಹಣದಲ್ಲಿ ಕೃಷಿ ಮೇಳ ಪಾ್ಯಷನ್‌ಗಾಗಿ ಮಾಡಬೇಕೇ? ಇದರಿಂದ ಗಾ್ರಮಾ್ಯ ಭರತದ ಕೃಷಿಕನಿಗೆ ನಯಾಪೈಸೆ ಉಪಯೋಗವಾಗುವುದಿಲ್ಲ.

ಹಳ್ಳಿಗಾಡಿನ ಜನತೆಗೆ ಕಡಿಮೆ ಮಳೆ ಬೀಳುವ ಒಣ ಭೂಮಿಯಲ್ಲಿ ಬೆಳೆಯ ಬಲ್ಲ ಹೊಸ ತಳಿಗಳು, ಕಣ್ಮರೆಯಾಗುತ್ತಿರುವ ನವಣೆ, ಆರ್ಕ, ಸಜ್ಜೆ, ರಾಗಿ, ಜೋಳ, ತೊಗರಿ, ಹೆಸರು, ಉದ್ದು, ಅವರೆ, ಉರುಳಿಯ ತಳಿ ಉಳಿಸಬೇಕು. ರೈತರಿಗೆ ಇಂತಹ ಅಪರೂಪದ ತಳಿಗಳ ಬೀಜದೊಂದಿಗೆ ಅಗತ್ಯ ಮಾರ್ಗದರ್ಶನ ದೊರೆಯಬೇಕು. ನಿಯಮದಂತೆ ಬೆಂಗಳೂರು- ಧಾರವಾಡ ಕೃಷಿ ವಿಶ್ವ ವಿದಾ್ಯಲಯಗಳ ಮಳಿಗೆಗಳನ್ನು ಹೊರತುಪಡಿಸಿದರೆ ಕೃಷಿ ಮೇಳದಲ್ಲಿ ಕೃಷಿಯ ಗಂಧವು ಗೋಚರಿಸಲಿಲ್ಲ. ಎತ್ತು, ಕತ್ತೆ, ನಾಯಿಗಳ ಪಾ್ಯಷನ್‌ ಶೋ ನಡೆಸಲಿಕಕ್ೆ ಕೃಷಿ ಮೇಳಗಳು ಯಾರಿಗೆ? ಅದು ರೈತರ ಹಣದಲ್ಲಿ ಮೇಳಗಳು ನಡೆಸಬೇಕೇ ಎಂಬ ಪ್ರಶ್ನೆಗಳನ್ನು ಕೃಷಿ ವಿವಿಗಳ ಪಂಡಿತರಿಗೆ ಕೇಳಬೇಡವೇ....

ಕೃಷಿ ರೋಗಗ್ರಸ್ಥ ಉದ್ದಿಮೆ...

ಕೃಷಿ ಮೇಳ ಉದಾ್ಘಟನೆಗೆ ಬಾರಿ ಉತ್ಸಹದಲ್ಲಿ ಧಾವಿಸಿದ್ದ ನಮ್ಮ ಸಚಿವ ಎಸ್‌.ಎ.ರವೀಂದ್ರನಾಥ್‌ಗೆ ರಾಜ್ಯಪಾಲ ಎಚ್‌.ಆರ್‌.ಭರದಾ್ವಜ್‌ ಜಾಡಿಸಿದ್ದು, ಮಾತ್ರ ಮುಟ್ಟಿನೋಡಿಕೊಳ್ಳುವಂತಿತ್ತು. ಬಾ್ಯಟರಾಯನಪುರದ ಶಾಸಕ ಕೃಷ್ಣಬೈರೇಗೌಡ ಕೂಡ ಕೃಷಿ ಸಚಿವ ಮತ್ತು ರಾಜ್ಯ ಸರಕಾರಕಕ್ೆ ಕೆಕಕ್ಮಕಕ್ ಉಗಿದು ಉಪಾ್ಪಕಕ್ಿದ್ದು, ನೆರೆದ ರೈತರಿಗೆ ಸಂತಸ ಕೊಟ್ಟಿದ್ದು, ರವೀಂದ್ರನಾಥ್‌ಗೆ ತಟ್ಟಲಿಲ್ಲ. ಅಧಿಕಾರ ಮತ್ತು ಹಣದ ಥೈಲಿಗಿಳಿದಿರುವ ರವೀಂದ್ರನಾಥ್‌ಗೆ ಸೂಕ್ಷ್ಮಗಳಿದ್ದಿದ್ದರೆ ರಾಜ್ಯದಲ್ಲಿ ರಸಗೊಬ್ಬರಕಾಕ್ಗಿ ರೈತರು ಬೀದಿಗಿಳಿಯುತ್ತಿರಲಿಲ್ಲ.

ಕೃಷಿ ಇಂದು ರೋಗಗ್ರಸ್ಥ ಉದ್ಧಿಮೆ ಎಂದೇ ಸರಕಾರಗಳು ಪರಿಗಣಿಸಿವೆ. ಈ ಹಿನ್ನೆಲೆಯಲ್ಲಿಯೇ ಅತ್ಯಂತ ನಿರ್ಲಕ್ಷಕಕ್ೆ ರೈತರು ಗುರಿಯಾಗಿದಾ್ದರೆ. ಯಾರಿಗೂ ಬೇಡದ ಕೃಷಿಕ ಅನಾಥನ ಸ್ಥಿತಿಯಲ್ಲಿ ಜೀವ ಹಿಡಿದುಕೊಂಡಿದಾ್ದನೆ. ರಾಜ್ಯ 17 ಪ್ರಗತಿಪರ ಕೃಷಿಕರಿಗೆ ಇದೇ ಕೃಷಿ ಮೇಳದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆದರೆ, ಈ ಸಮಾರಂಭಕಕ್ೆ ಆಗಮಿಸಬೇಕಿದ್ದ ಯಡಿಯೂರಪ್ಪ ಸಂಘ ಪರಿವಾರದ ಸರಸಂಚಾಲಕ ಮೋಹನ್‌ ಭಗವತ್‌ರನ್ನು ಭೇಟಿ ಮಾಡಲು ಚಡ್ಡಿ ಹಾಡಿಕೊಂಡು ತೆರಳಿದ್ದರು. ಪ್ರಶಸ್ತಿ ಸ್ವೀಕರಿಸಿ ರೈತನೊಬ್ಬ ಮುಖ್ಯಮಂತ್ರಿಗಳಿಗೆ ತಾರಾಮಾರ ಬೈಯುತ್ತಿದ್ದರೆ ಕೃಷಿ ವಿವಿಯ ಕುಲಪತಿ ಡಾ.ಚಂಗಪ್ಪ ಕರ್ಚಿಫ್‌ ತೆಗೆದುಕೊಂಡು ಮುಖದ ಮೇಲಿನ ನೀರು ಒರೆಸಿಕೊಳ್ಳುತ್ತಿದ್ದರು.

‘ನಮ್ಮ ಭತ್ತ, ರಾಗಿಯ ತಿಂದ..ಕತ್ತೆ ಸೊ...ಮಗ ಎಲ್ಲವನೆಲ್ಲವನೇ’ ಎಂಬ ರೈತಗೀತೆಯ ಧ್ವನಿ ಇಂತಹ ರೈತ ವಿರೋಧಿ ಮೇಳಗಳ ವಿರುದ್ಧ ಮೊಳಗಬೇಡವೇ... ಕೃಷಿ ವಿವಿಗಳು ಹೀಗೆ ಮುಂದುವರಿದರೆ ಕಾಯಿಕೊರಕಗಳಂತೆ ರೈತರ ಜೀವ ಹಿಂಡುವ ಜನರನ್ನು ಯಾರು ನಿಯಂತ್ರಿಸಬೇಕು.


ರಾಮಜೋಗಿಹಳ್ಳಿ ಪ್ರಕಾಶ್

Sunday, November 22, 2009

ಬೆಂಕಿಯಂತ್ತಿದ್ದ ಯಡಿಯೂರಪ್ಪನವರಿಗೆ ಎಂತ ಸ್ಥಿತಿ .........!

"ಪಾಪಾ"
ನಮ್ ರಾಜ್ಯದ ಮುಖ್ಯ ಮಂತ್ರಿ ಯಡಿಯೂರಪ್ಪನವರನ್ನು ನೋಡಿದರೆ ಯಾರಿಗಾದರೂ ಹೀಗನಿಸೇ ಅನಿಸುತ್ತದೆ. ಬಂಡಾಯ ಸಾರಿದ್ದಗಣಿ ಧಣಿ ಮುಂದೆ ಮಂಡಿಯೂರಿ, ಹೈಕಮ್ಯಾಂಡ್
ಹತ್ತಿರ ಗೋಗರೆದು ಕುರ್ಚಿ ಉಳಿಸಿಕೊಂಡು ಬಂದರು ಕಾಟಾ ತಪ್ಪಿಲ್ಲ. ಕುರ್ಚಿಗಾಗಿಪಾಪಾ ತಮ್ಮನೇ ನಂಬಿದ್ದ ಶೋಭಾರನ್ನು, ಪ್ರಧಾನ ಕಾರ್ಯದರ್ಶಿ ಬಳಿಗಾರನ್ನು ಕೈ ಬಿಟ್ಟು ಕಣ್ಣೀರಿಟ್ಟರು ಕೊನೆಗೆ ಹೇಗೋ ಕುರ್ಚಿಉಳಿಯಿತು ಅನೋವಾಗ, ಮತ್ತೆ ಗಣಿ ಭೂತ ಎದುರಾಗಿದೆ.
ಒಂದೆಡೆ ಆಂಧ್ರ ಪ್ರದೇಶ ಸರಕಾರ ತನ್ನ ನೆಲೆಯಿಂದ ಬಳ್ಳಾರಿ ಜಿಲ್ಲೆಗೆ ಹೊಂದಿಕೊಂಡಿರುವ ಪ್ರದೇಶದ ಗಡಿ ಭಾಗದಗಣಿಗಾರಿಕೆಯನ್ನು ಸಿ.ಬಿ..ಗೆ ಒಪ್ಪಿಸಿದೆ, ಇನ್ನೊಂದೆಡೆ ಸುಪ್ರೀಂ ಕೋರ್ಟ್ ಹೈಪವರ್ ಕಮಿಟಿಗೆ ವಹಿಸಿ ವರದಿ ಪಡೆದುಕೊಂಡುಕಠಿಣ ಕ್ರಮದ ಮುನ್ಸೂಚನೆ ನೀಡಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಎರಡು ರಾಜ್ಯಗಳ ಗಡಿ ಒತ್ತುವರಿ ಆಗಿರುವುದ್ದರಿಂದ ತಕ್ಷಣಗಣಿಗಾರಿಕೆ ನಿಲ್ಲಿಸಬೇಕು ಎಂದು ಅದೇಶಿದರೆ ಅನಿವಾರ್ಯವಾಗಿ ಕ್ರಮ ಕೈಗೊಳ್ಳಲೇ ಬೇಕಾಗಬಹುದು ಅಥವಾ ಸಿ.ಬಿ.. ತನಿಖೆಗೆಇಳಿದರೆ ಗೌರವಯುತ
ಸರಕಾರವಾಗಿ ಅಗತ್ಯ ಸಹಕಾರ ನೀಡಲೇ ಬೇಕು. ಎರಡರಲ್ಲಿ ಯಾವುದು ನಡೆದರೂ ಗಣಿ ಉದ್ಯಮಿಗಳುನಷ್ಟ ಅನುಭವಿಸುವುದು ಖಚಿತ. ರಾಜಕೀಯವನ್ನು ಒಂದು ಉದ್ಯಮ ಅಂದುಕೊಂಡಿರುವ ಗಣಿ ದೊರೆಗಳಿಗೆ ತಮ್ಮ ಬುಡಕ್ಕೆ ನೀರುಬಂದಾಗ ರಾಜ್ಯ, ಜನ, ಯಡಿಯೂರಪ್ಪ ಯಾವುದು ಲೆಕ್ಕಕ್ಕಿರುವುದಿಲ್ಲ.
ತಮ್ಮ ಕಣ್ಣು ಹೋದರು ಚಿಂತೆ ಇಲ್ಲ ಎದುರಾಳಿಯ ಎರಡು ಕಣ್ಣು ತೆಗೆಯಬೇಕು ಎಂಬ ಹಠವಾದಿ ಜನಾರ್ದನ ರೆಡ್ಡಿ ಈಗಾಗಲೇಯಡಿಯೂರಪ್ಪನವರಿಗೆ ತಮ್ಮ ಹಠದ ಪರಿಚಯ ಮಾಡಿಸಿದ್ದಾರೆ. ಕಂತೆಗೆ ತಕ್ಕ ಬೊಂತೆ ಎಂಬಂತೆ ರೇಣುಕ ಎಂಬ ನರ್ಸೋಬಳಗೆಣೆಯ, ಬೇಳೂರು ಗೋಪಾಲ ಕೃಷ್ಣ ಎಂಬವರು ತಮ್ಮದೊಂದು ಪಡೆ ಕಟ್ಟಿಕೊಂಡು ಯಡಿಯೂರಪ್ಪನವರ ಬುಡಕ್ಕೆ ಕೆಂಡಹಾಕುತ್ತಿದ್ದಾರೆ. ದುರಂತವೆಂದರೆ ಇದೆ ರೇಣುಕನನ್ನು, ಯಡಿಯೂರಪ್ಪನವರೇ ಬೆಳೆಸಿದು. ಮಾನಸ ಪುತ್ರ ರೇಣುಕ ಹದ್ದಾಗಿದ್ದಾನೆ.
ಸಿ.ಬಿ.. ತನಿಖೆ-ಸುಪ್ರೀಂ ಕೋರ್ಟ್ ಆದೇಶ ಪಾಲನೆ ಯಾವುದಕ್ಕೆ ಕೈ ಇಟ್ಟರು ಯಡಿಯೂರಪ್ಪ ಮಾಜಿಯಾಗುವುದು ಗ್ಯಾರಂಟಿ.
"ಮಾಡಿದ ಪಾಪಾ ಬೆನ್ನಿಗೆ ಬಿದ್ದಾಗ ತಿನ್ನುವ ಬದನೆ ಕಾಯಿ ದೆವ್ವ ಆಗುತ್ತಂತೆ" ಒಂದು ಕಾಲದಲ್ಲಿ ಹಣವಿದ್ದ ಗಣಿಧಣಿಗಳಿಗೆ ಮಣೆಹಾಕಿದಕ್ಕೆ ಯಡಿಯೂರಪ್ಪ ಪ್ರಾಯಾಶ್ಚಿತ ಪಡಲೇ ಬೇಕು.
ಹಿಂದೆ ರಾಮಕೃಷ್ಣ ಹೆಗಡೆ, ದೇವರಾಜ ಅರಸು ತಾವು ಮುಖ್ಯಮಂತ್ರಿಯಾಗಲು ಹಣವಂತರ ನೆರವು ಪಡೆದುಕೊಂಡಿದರು. ಆದರೆ, ಹಣ ಮತ್ತು ಅಧಿಕಾರ ಒಂದೆಡೆ ಕೆಂದ್ರಿಕೃತವಾಗಬರದು ಎಂಬ ತತ್ವ ಪಾಲಿಸಿಕೊಂಡು ಬಂದಿದ್ದರು.
ಯಡಿಯೂರಪ್ಪನವರಿಗೆ ಯಾರು ಸಲಹೆ ಕೊಟ್ಟರೋ ಗೊತ್ತಿಲ್ಲ. ದಡ್ದರಂತೆ ಗಣಿಧಣಿಗಳನ್ನು ಹತ್ತಿರಕ್ಕೆ ತಂದುಕೊಂಡು ಈಗಕ್ಯಾಮರಗಳೆದುರು
ಜೋಕರ್ ರೀತಿ ನಗುತ್ತಾರೆ. ನಗು ನೋಡಿದರೆ ಪಾಪಾ ಅನಿಸುತ್ತದೆ.
ರಾಜ್ಯದ ಮುಖ್ಯಮಂತ್ರಿಗೆ ಸ್ಥಿತಿ ಬರಬಾರದಿತ್ತು.
ಏನಾದರು ಹಾಳಾಗಲಿ ಪ್ರಜಾಪ್ರಭುತ್ವದಂತೆ ಐದು ವರ್ಷ ಸರಕಾರ ಉಳಿದರೆ ಸಾಕು ಎಂದು ಜನ ನಿಟ್ಟುಸಿರು ಬಿಡುತ್ತಿದ್ದಾರೆ.
ಯಡಿಯೂರಪ್ಪ
ಗಣಿ ಸಂಪತ್ತು ಅಡವು ಮಾಡಿಯಾದರೂ ಜನರ ಆಸೆಯಂತೆ ಸರಕಾರ ಉಳಿಸಿ ಕೊಳ್ಳುತಾರೋ ಅಥವಾ ರಾಜಕೀಯತಂತ್ರಗಾರಿಕೆ ಮೆರೆದು ತೆರೆ ಮರೆಯಲ್ಲಿ ಗಣಿಧಣಿಗಳನ್ನು ಮಟ್ಟ ಹಾಕುತ್ತಾರೋ ಎಂಬುದೇ ಕದನ ಕುತೂಹಲ
ಎಲ್ಲದಕ್ಕೂ ಕಾಲನೆ ಉತ್ತರ ಹೇಳಬೇಕು ............ !
ಬೆಂಕಿಯಂತ್ತಿದ್ದ ಯಡಿಯೂರಪ್ಪನವರಿಗೆ ಎಂತ ಸ್ಥಿತಿ .........!
ಬಿತ್ತಿಯೂ ಬೆಳೆ ಕಾಣದೆ ಅಳುವವರ
ಕಣ್ಣೀರು ಒರೆಸಬಾರದೇ....

ಪೆನ್ನಿನ ಧ್ವನಿ ಪ್ರಾಣವೆನಗೆ

ಪ್ರಜೆಗೆ ನಾನು ಅರ್ಪಿತ,

ಹೋರಾಟವೇ ಡೈರಕ್ಷನ್

ಹಾಡು ನನಗೆ ಆಕ್ಸಿಜನ್
ಎಂಬ ಕವಿವಾಣಿ ನಿತ್ಯ ನೂತನ.

ಪತ್ರಿಕೆಗೆ ಲೇಖನಿಯೇ ಜೀವಾಳ. ಲೇಖನಿಯನ್ನು ಉಳ್ಳವರು ತಮಗೆ ಬೇಕಾದರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಆರಂಭದಿಂದಲೂ ಪತ್ರಿ
ಕಾರಂಗ ನಿಜವಾಗಿಯೂ "ಜನತೆ" ಪರವಾಗಿತ್ತು ಅವರಬೇಕು-ಬೇಡಗಳನ್ನು ಪ್ರತಿಫಲಿಸುತ್ತಿದ್ದವು. ಆದರೆ, ಇಂದು ಪತ್ರಿಕಾರಂಗ ತನ್ನ ಮೂಲನೆಲೆಯಿಂದ ದಿಕ್ಕು ಬದಲಿಸಿ, ಮಗ್ಗಲು ತಿರುಗಿಸಿದೆ. ಈಗ ಅದು ಉದ್ಯಮವಾಗಿದೆ. ಇಲ್ಲಿಯೂ ಹಿಡಿ ಧಾನ್ಯವ ಬಿತ್ತಿ ಖಂಡುಗ ಬೆಳೆಯಬೇಕೆಂಬ ಹೆಬ್ಬಯಕೆ ಮನೆಮಾಡಿದೆ. ಪ್ರಕೃತಿ ಸಹಜ ಬಯಕೆಗಳನ್ನು ತೀರಿಸಬಹುದು, ಆದರೆ, ಅಂಗ-ಅಂಗಗಳಿಗೆಲ್ಲ ಹೊತ್ತಿಕೊಂಡ ಇಂಗದ ದಾಹ ತೀರುವುದೆಂತೂ?
ಲೇಖನಿಯನ್ನು ಕುಳವಾಗಿಯೂ, ಖಡ್ಗವಾಗಿಯೂ ಮಾತ್ರವಲ್ಲ, ಚಿಕಿತ್ಸೆ ಮಾಡುವಶಸ್ತ್ರ- ಅಸ್ತ್ರವಾಗಿಯೂ ಬಳಕೆ ಮಾಡಬಹುದು. ನಾವು ಯಾವುದನ್ನು ಎಷ್ಟುಪ್ರಮಾಣದಲ್ಲಿ ಯಾರಿಗೆ, ಹೇಗೆ ಮತ್ತು ಯಾವ ಕಾರಣಗಳಿಗೆ ಬಳಕೆಮಾಡುತ್ತೇವೆಂಬುದು ಬಹಳ ಮುಖ್ಯ. ಗ್ರಾಮ್ಯಾ ಸೊಗಡಿನ ಚಿತ್ರದುರ್ಗ ಜಿಲ್ಲೆಯಲ್ಲಿಪತ್ರಿಕೆಯೊಂದನ್ನು ಇವತ್ತಿನ ಸಂದರ್ಭದಲ್ಲಿ ತರಬೇಕೆಂದು ಹಂಬಲಿಸುವುದುಕನಸಿರುವವರಿಗೆ ಮಾತ್ರ ಸಾಧ್ಯ ಎಂಬುದು ನನ್ನ ಅಚಲ ನಂಬಿಕೆ. ಕನಸಿದ್ದ ಮಾತ್ರಕ್ಕೆ ಅದು ವಾಸ್ತವಕ್ಕೆ ಇಳಿಯುವುದು ಸಾಧ್ಯವೆಂಬಪ್ರಶ್ನೆ ಏಳುತ್ತದೆ.
ಅದೇನೆ ಇದ್ದರೂ, ಪತ್ರಿಕೆ, ಪತ್ರಿಕಾರಂಗ ಮತ್ತು ಪತ್ರಿಕೋದ್ಯಮದ ಗಂಧದ ಸೆಳೆತಕ್ಕೆ ಸಿಕ್ಕು ಹಿಡಿಮುಷ್ಠಿಯೊಳಗೆ ಪ್ರಪಂಚವನ್ನೆಹಿಡಿದುಕೊಳ್ಳವ ಹುಂಬ ಪ್ರಯತ್ನವೇಕಾಗಬಾದೇಕೆ? ಆದರೂ, ಪ್ರಯತ್ನಕ್ಕೆ ಯಶಸ್ಸು ಇದೆ. ಅದು ನಮ್ಮ ನಡಿಗೆಯ ಮೇಲೆ ನಿಂತಫಲ.
ಇಂದು ಪತ್ರಿಕೋದ್ಯಮ ಅತ್ಯಂತ ವಿಸ್ತಾರವಾಗಿ ಆವರಿಸಿಕೊಂಡಿದೆ. ಏಷ್ಟೇ ಆಳ-ಅಗಲಕ್ಕೆ ಆವರಿಸಿಕೊಂಡಿದ್ದರೂ, ಅದು ಪ್ರಸ್ತುತಕೇವಲ ಶೇ.5ರಷ್ಟು ಜನತೆಯ ಭಾವನೆ-ಮತ್ತವರ ತುಮುಲ, ಬೇಕು-ಬೇಡಗಳನ್ನು ಮಾತ್ರ ಪ್ರಚುರ ಪಡಿಸುತ್ತದೆ.
ನಮ್ಮ ಬಡ ಭಾರತದಲ್ಲಿ ಇಂದಿಗೂ ಎಲೆಮರೆಯ ಕಾಯಿಯಂತೆ ತಮ್ಮ ಜೀವನವನ್ನೇ ಗಂಧದಂತೆ ತೇಯುತ್ತಿರುವ ಹಳ್ಳಿಗಾಡಿನಶೇ.70ರಷ್ಟು ಜನಸಾಮಾನ್ಯ ಬದುಕು-ಭವಣೆಗಳನ್ನು ಪ್ರತಿಕೋದ್ಯಮ ಪರಿಗಣಿಸಲೇ ಇಲ್ಲ. ಸ್ವಾತಂತ್ರ ಬಂದು ಆರು ದಶಕಗಳೇಕಳೆದರೂ ಇಂದಿಗೂ ನಮ್ಮ ಹಳ್ಳಿಗಾಡಿನ ಜನ ಹಸಿವಿಂದ ಸಾಯುತ್ತಿದ್ದಾರೆ. ಗ್ರಾಮ್ಯಾ ಭಾರತದ ಬಹುದೊಡ್ಡ ರೈತ ಸಮೂಹ ದೇಶದಬೆನ್ನೆಲುಬಾಗಿರುವ ರೈತರು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಸಾಲು-ಸಾಲಾಗಿ ಶರಣಾಗುತ್ತಿದ್ದಾರೆ.
ಸರಕಾರದ ಮಾಹಿತಿಯಂತೆ 1997ರಿಂದ 2005 ವರೆಗೆ ನಮ್ಮ ದೇಶದಲ್ಲಿ 1.50 ಲಕ್ಷಕ್ಕೂ ಅಧಿಕ ಮಂದಿ ರೈತರು ಸಾವಿಗೆಶರಣಾಗಿದ್ದಾರೆ. ಇದು ನಮ್ಮ ಮಾಧ್ಯಮಗಳಿಗೆ ಸುದ್ಧಿಯಾಗಲಿಲ್ಲ. ಹಳ್ಳಿಗಾಡಿನ ಸಮೂಹ ಕೇವಲ 5 ವರ್ಷಗಳಿಗೂಮ್ಮೆ ಬರುವಚುನಾವಣೆಗಳಲ್ಲಿ ಮಾತ್ರ ಬೆದರು ಬೊಂಬೆಗಳಂತೆ ಇರಬೇಕು ಅಷ್ಟೇ. ಉಳಿದಂತೆ ಅವರು ನಿರ್ಜಿವ.
ಇಂತಹ ದೌರ್ಭಗ್ಯ ದಮನಿತ ಬಡ-ರೈತ, ಕೃಷಿ ಕೂಲಿ ಕಾರ್ಮಿಕರ ಒಳಕುದಿತಕ್ಕೆ ಪತ್ರಿಕೆ, ಮಾಧ್ಯಮ, ಲೇಖಗಳ ಧ್ವನಿಯಾಗುವುದುಅವುಗಳ ಜವಾಬ್ದಾರಿಯಾಗಿತ್ತು. ಆದರೆ, ಹಳ್ಳಿಗಾಡಿನ ಸಮೂಹವಿಂದು ಮಾಧ್ಯಮಗಳಲ್ಲಿ ಕೇವಲ ನಿಧನ ವಾರ್ತೆ ಮತ್ತು ಅದರಮಗ್ಗುಲಲ್ಲೆ ಬರುವ ಶ್ರದ್ಧಾಂಜಲಿಗೆ ಸೀಮಿತಗೊಂಡಿವೆ. ಪತ್ರಿಕೆ ಯಾರಿಗೆ-ಏನ್ನನ್ನು ತಲುಪಿಸಬೇಕು ಎಂಬ ದಿಕ್ಸೂಚಿ ಅಗತ್ಯ.

ರಾಜ್ಯದ ಉತ್ತರ ಕರ್ನಾಟಕದ 15 ಜಿಲ್ಲೆಗಳ 200ಕ್ಕೂ ಹೆಚ್ಚು ಮಂದಿ ನೆರೆ ಹಾವಳಿಯಿಂದ ಅಸುನಿಗಿದ್ದಾರೆ. 4ಲಕ್ಷಕ್ಕೂ ಅಧಿಕ ಮಂದಿಮನೆ-ಮಠ ಕಳೆದುಕೊಂಡು ಬೀದಿಯಲ್ಲಿ ನಿಂತಿದ್ದಾರೆ. ಸಾವಿರಾರು ಹಳ್ಳಿಗಳು-ಲಕ್ಷಾಂತರ ಎಕರೆಯಲ್ಲಿದ್ದ ಬೆಳೆ ಸಂಪೂರ್ಣನಾಶವಾಗಿದೆ. ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದ್ದ ಸರಕಾರ ನನ್ನಿಂದ ಏನು ಸಾಧ್ಯವಿಲ್ಲ ಎಂದು ಭೀಕ್ಷೆಗೆ ನಿಲ್ಲುತ್ತದೆ. ನೆರೆಯವೇಗದಲ್ಲೆ ಸರಕಾರ ಭಿನ್ನಮತದ ಬಿಕ್ಕಟ್ಟಿಂದ ಆತಂಕಕ್ಕೆ ಸಿಲುಕತ್ತದೆ. ಆದರೆ, ನಮ್ಮ ಮಾಧ್ಯಮಗಳು ನೆರೆಯ ಸಂತ್ರಸ್ತರನ್ನು ಬಿಟ್ಟುಮುಖ್ಯಮಂತ್ರಿ, ಸಚಿವರು, ಶಾಸಕರುಗಳ ಮನೆಯ ಕಾವಲು ನಾಯಿಗಳಾಗಿ ನಿಲ್ಲುತ್ತವೆ. ಅವರ ಮನೆಗಳಿಗೆ ಬರುವ ಹಲ್ಲಿ, ಹಾವು, ಬೆಕ್ಕುಗಳು ಮತ್ತು ಅವು ಬಂದ ರಾಶಿ-ನಕ್ಷತ್ರ, ಶಕುನಗಳ ಪರಾಮರ್ಶೆಗೆ ನಿಲ್ಲುತ್ತವೆ. ಅದು ಅತ್ಯಂತ ಮಹತ್ವದ ಸುದ್ಧಿಯಾಗುತ್ತವೆ. ಇದು ನಮ್ಮ ಆಧ್ಯತೆಯಾಗಬೇಕೇ?
ಮುಖ್ಯವಾಹಿಯಲ್ಲಿಂದು ಹೂವಿನಷ್ಟೇ ಪರಿಮಳ ಮತ್ತು ಅಷ್ಟೇ ಆಯಸ್ಸಿನ ಹಲವಾರು ಪತ್ರಿಕೆಗಳು ಬಂದು-ಹೋಗುತ್ತಿವೆ. ಇಂತಹವುಗಳ ಸಾಲಿಗೆ ನಾವು ಸೇರುವುದು ಕಷ್ಟದ ಕೆಲಸವಲ್ಲ. ಇವೆಲ್ಲಕ್ಕಿಂತ ನಾವು ಭಿನ್ನ ಎಂಬುದಾದರೆ ನಮ್ಮ ಆಧ್ಯತೆ ಏನುಎಂಬ ಪ್ರಶ್ನೆ ಹಾಕಿಕೊಳ್ಳಬೇಕು. ದಾರಿಯಲ್ಲಿ ಕಣ್ಣು ಬಿಡಬೇಕು. ಆರಳಿಸಿ ನಿಂತು ಮುಂದೆ ಸಾಗಬೇಕು.
ದಿ ಹಿಂದೂಪತ್ರಿಕೆಯ ಕೃಷಿ ವಿಭಗದ ಮುಖ್ಯ ಅಂಕಣಕಾರ ಪಿ.ಸಾಯಿನಾಥ್ ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕಲಿತರೂ, ಹಳ್ಳಿಗಾಡಿನ ಗ್ರಾಮ್ಯಾ ಸೊಗಡಿನ ಸಗಣಿ-ಗಂಜಳ ಮಧ್ಯೆದ ಬದುಕಿನ ಪರಿಮಳ ಗ್ರಹಿಸಿದವರು.
ರೈತರ ಆತ್ಮಹತ್ಯೆ ಹಿಂದಿನ ನಗ್ನ ಸತ್ಯಗಳನ್ನು ದಂತ ಗೋಪುರದೊಳಗಿದ್ದ ಮಾಧ್ಯಮಗಳಿಗೆ ಬಿಚ್ಚಿಟ್ಟ ದೀಮಂತ ವ್ಯಕ್ತಿ. ಅವರ ಲೇಖನನೀವು ಬಿತ್ತಿದ್ದೀರಿ, ಅದಕ್ಕೀಗ ಅಳುತ್ತೀರಿ ಎಂಬ ಶೀರ್ಷಿಕೆ ಇದೇ ಸಂದರ್ಭದಲ್ಲಿ ನೆನಪಾಗುತ್ತದೆ. ಬಿತ್ತಿಯೂ ಬೆಳೆಕಾಣದೆ ಅಳುವವರಕಣ್ಣೀರು ಒರೆಸಲು ನಾವು ಮುಂದಾಗಬೇಡವೇ? ಅವರು ನಮ್ಮ ಆದ್ಯತೆ ಏಕಾಗಬಾರದು...

ರಾಮಜೋಗಿಹಳ್ಳಿ ಪ್ರಕಾಶ

ನನ್ನ ಸಹೋದ್ಯೋಗಿ ಮಿತ್ರ ರಾಮಜೋಗಿಹಳ್ಳಿ ಪ್ರಕಾಶ್
ರೈತರ ಬಗ್ಗೆ ತಮ್ಮ ಹೊಟ್ಟೆಯಲ್ಲಿದ್ದ ಕಾಳಜಿಯನ್ನು
ಕೀ ಬೋರ್ಡ್ ಮೂಲಕ ಕಂಪ್ಯೂಟರ್ ಗೆ ತುರುಕಿದ್ದಾರೆ.

ಅದರ ಯತಾವತ್ತು ರೂಪ ಮೇಲಿದೆ.
ಉಮೇಶ್ ಕೋಲಿಗೆರೆ

Sunday, September 6, 2009

ಸ್ಟಂಟ್ ಗಳ ಮ್ಯಾನ್ ಟೋನಿ-ಜಾ

ಜಾಕಿಚಾನ್ ನಂತರ ಈಗಿನ ಮಟ್ಟಿಗೆ ನಿಜವಾದ ಸ್ಟಂಟ್ ಗಳ ಮ್ಯಾನ್ ಟೋನಿ-ಜಾ

ಹೆಣ್ಣು ಅಬಲೆಯಲ್ಲ ಸ್ವಾಮೀ

ಯಾರು ಹೇಳಿದ್ದು ಹೆಣ್ಣು ಅಬಲೆಯೆಂದು, ವಿಡಿಯೊ ನೋಡಿ ನಂತರ ಹೇಳಿ ಸ್ವಾಮಿ.



ಪಾಪ ಆಯಮ್ಮನ ಕೈಗೆ ಸಿಕ್ಕವನನ್ನು ನೋಡಿ, ಹೇಗೆ ಹಣ್ಣುಗಾಯಿ-ನೀರುಗಾಯಾಗಿದ್ದಾನೆ.




ಹೋಗಲಿ ಬಿಡಿ, ಇನ್ನು ಹೆಣ್ಣು ಮಕ್ಕಳಾದರು ಒಳ್ಳೆ ಫೆಂಡ್ಸ್ ರೀಟಿ ಇರ್ತಾರೆ ಅನ್ಕೊಂಡೇರೆ, ಇಲ್ನೋಡಿ. ಪಾಪ ಬಿಡಿಸಲು ಮಧೇ ಹೋದವನ ಹೇಗೆ ಜಜ್ಜಿ ಹೋಗಿದೆ.

ಅಬ್ಬಬ್ಬಾ ಕಷ್ಟ ಕಣ್ರಿ

Friday, September 4, 2009

ಖಾಸಗಿ ಆಸ್ಪತ್ರೆಗಳ ಗುಲಾಮರಾಗಿರುವ ಆರೋಗ್ಯ ಇಲಾಖೆ ಅಧಿಕಾರಿಗಳು

ರಾಜ್ಯದಲ್ಲಿ ಒಂದೆಡೆ ಹಂದಿಜ್ವರದಿಂದ ಜನ ಸಾಯುತ್ತಿದ್ದರೆ, ಮತ್ತೊಂಡೆದೆ ರಾಜ್ಯ ಸರಕಾರ ರೋಗಿಗಳ ಹಿತರಕ್ಷಣೆಗೆ ಬದಲಿಗೆ ಖಾಸಗಿ ಆಸ್ಪತ್ರೆಗಳ ಹಿತಾರಕ್ಷಣೆಗೆ ಟೊಂಕಕಟ್ಟಿ ನಿಂತಿದೆ. ಮಾರಕ ಜ್ವರದಿಂದ ಚೇತರಿಸಿಕೊಳ್ಳದೆ ಸತ್ತವರ ಸಂಖ್ಯೆ ರಾಜ್ಯದಲ್ಲಿ 40 ಗಡಿದಾಟಿದೆ. ಬೆಂಗಳೂರೊಂದರಲ್ಲೇ 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಖಾಸಗಿ ಆಸ್ಪತ್ರೆಗಳು ಹಣದಾಸೆಗೆ ಜನರ ಪ್ರಾಣ ತೆಗೆಯುತ್ತಿವೆ. ಬಹಳಷ್ಟು ಆಸ್ಪತ್ರೆಗಳಿಗೆ ಎಚ್‌1ಎನ್‌1 ಪರೀಕ್ಷೆ ನಡೆಸುವುದೇ ಗೊತ್ತಿಲ್ಲ. ಆದರೂ, ಜ್ವರದಿಂದ ರೋಗಿಗಳ ಸಂಖ್ಯೆ ಹೆಚ್ಚಾಗಿ ಆಸ್ಪತ್ರೆಗಳ ಬೆಡ್‌ ತುಂಬುತ್ತವೆ ಎಂಬ ಕಾರಣಕ್ಕೆ ಸರಕಾರದೊಂದಿಗೆ ಎಂ.ಒ.ಯು ಮಾಡಿಕೊಂಡು, ಚಿಕಿತ್ಸೆ ನೀಡುಲು ಮುಂದಾಗಿದೆ. ಪರೀಕ್ಷೆ ಮಾಡುವುದೇ ಗೊತ್ತಿಲ್ಲದ ಆಸ್ಪತ್ರೆಗಳು ಇನ್ನು  ಪ್ರಾಣವನ್ನು ಉಳಿಸುವುದೇಷ್ಟು ಎಂಬುದನ್ನು ಊಹಿಸಬಹುದು. ರೋಗದ ಬಗ್ಗೆ  ಪ್ರಾಥಮಿಕ ಮಾಹಿತಿಯೂ ಇಲ್ಲದ ವೈದ್ಯರು ರೋಗಿಯ ಬಾಯಿಗೆ ಟ್ಯಾಮಿಫ್ಲ್ಯೊ ಮಾತ್ರೆಗಳನ್ನು ತುರುಕಿ ಇದೇ ಚಿಕಿತ್ಸೆ ಎಂದು ಹಣ ವಸೂಲಿ ಮಾಡುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಸೋಂಕನ್ನು ಗುರುತಿಸದೇ, ಸೂಕ್ತ ಚಿಕಿತ್ಸೆ ನೀಡದಿರುವುದರಿಂದ ಹಂದಿಜ್ವರ ಉಲ್ಬಣಗೊಂಡು ರೋಗಿಯ ಸ್ಥಿತಿ ಚಿಂತಾಜನಕವಾದಾಗ ಪ್ರತಿಷ್ಠಿತ ಎಂದು ಗುರುತಿಸಿಕೊಂಡಿರುವ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಆ ವೇಳೆಗೆ ಎಕ್‌‌ಸಪೈರಿ ಡೆಡ್‌ ಹತ್ತಿರವಾಗಿ ರೋಗಿ ಸಾವನ್ನಪ್ಪುತ್ತಾನೆ.
ಹೆಚ್ಚು ರೋಗಿಗಳು ಸತ್ತೆಗೆ ಆಸ್ಪತ್ರೆಗಳ ಹೆಸರು ಕೆಟ್ಟು ಆದಾಯಕ್ಕೆ ಖೋತಾ ಆಗಬಹುದೆಂಬ ಆತಂಕದಿಂದ ರೋಗಿಗಳ ಸಾವಿನ ಸಂಖ್ಯೆನ್ನು ಮುಚ್ಚಿಟಲು ಯತ್ನಿಸಲಾಗುತ್ತದೆ. ಇದಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಗೋಣೆ ಬಸವನ ಹಾಗೇ ತಲೆ ಆಡಿಸುತ್ತಿದ್ದಾರೆ, ಅದು ಪುಗಸಟ್ಟೆ ಅಲ್ಲ ಎಂಬ ಕುಹಕಕ್ಕೆ, ಸಂಬಂಧಿಸಿದವರೆ ಉತ್ತರ ಹೇಳಬೇಕು.
ರೋಗಿಗಳ ಸಂಖ್ಯೆ ಐದುನೂರರ ಗಡಿದಾಟಿದ್ದರೂ ಗುಣಮಟ್ಟದ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಿಲ್ಲ. ಈಗಾಗಲೇ 83 ಆಸ್ಪತ್ರೆಗಳನ್ನು ಗುರುತಿಸಲಾಗಿದ್ದರೂ ಅವುಗಳಲ್ಲಿ ಕೆಲವು ರೋಗಿಗಳನ್ನು ದಾಖಲಿಸಿಕೊಳ್ಳಲು ಹಿಂಜೆರಿಯುತ್ತಿವೆ. ಚಿಕಿತ್ಸೆಗಾಗಿ ಹೋಗುವ ರೋಗಿಗಳನ್ನು ಎ ಮತ್ತು ಬಿ ಕ್ಯಾಟಗರಿ ಎಂದು ತೀರ್ಮಾನಿಸಿ ಟ್ಯಾಮಿಫ್ಲ್ಯೊ ಔಷಧ ನೀಡಿ ಮನೆಗೆ ಕಳುಹಿಸುತ್ತಿವೆ. ಮಾತ್ರೆಗಳನ್ನು ಸೇವಿಸಿ ಸಾರ್ವಜನಿಕವಾಗಿ ತಿರುಗಾಟುವ ರೋಗಿಗಳಿಂದ ಸೋಂಕು ಇನ್ನಷ್ಟು ವೇಗವಾಗಿ ಹಬ್ಬುತ್ತಿದೆ.
ಇನ್ನು ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಂಡರೂ ಹಣ ಸುಲಿಗೆ ಮಾಡುಲಿಕ್ಕಾಗಿ ಚಿಕಿತ್ಸೆಯನ್ನು ಮೆಗಾಸಿರಿಯಲ್‌ ರೀತಿ ಎಳೆದು ರೋಗಿಯನ್ನು ಸಾಯಿಸುತ್ತಿವೆ. ಪರೀಕ್ಷಾ ಕಿಟ್‌ಗೆ ತಗಲುವ 2 ಸಾವಿರ ರೂಪಾಯಿ ವೆಚ್ಚವನ್ನು ಭರಿಸುವುದಾಗಿ ಸರಕಾರ ಹೇಳಿದೆಯಾದರೂ ಅದನ್ನು ಕೆಲವು ಆಸ್ಪತ್ರೆಗಳು ರೋಗಿಗಳಿಂದಲೇ ವಸೂಲಿ ಮಾಡುತ್ತಿವೆ. ಸರಕಾರದಿಂದ ಹಣ ಬಂದಾಗ ನೀವೆ ತೆಗೆದುಕೊಳ್ಳಿ ಎಂಬ ಕಾರಣವನ್ನು ಆಸ್ಪತ್ರೆಯ ವೈದ್ಯರು ಹೇಳುತ್ತಿದ್ದಾರೆ. ಇದರಿಂದಾಗಿ ಸರಕಾರ ಆರ್ಥಿಕ ನೆರವು ನೀಡುತ್ತಿದ್ದರೂ ಅದು ಬಡರೋಗಿಗಳಿಗೆ ತಲುಪುತ್ತಿಲ್ಲ.
ಇಂತಹ ಆಸ್ಪತ್ರೆಗಳ ವಿರುದ್ಧ ದೂರು ನೀಡಿದ್ದರೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುವ ಬದಲಿಗೆ ದೂರು ನೀಡಿದವರಿಗೆ ಆಸ್ಪತ್ರೆಗಳಿಂದ ಹಣ ಕೊಡಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಉಳಿದ ಸಾಮಾನ್ಯ ರೋಗಿಗಳು ಈ ಸಮಸ್ಯೆಯನ್ನು ನಿರಂತರವಾಗಿ ಅನುಭವಿಸುತ್ತಲೇ ಇದ್ದಾರೆ.

Thursday, September 3, 2009

ಅಧುನಿಕ ರಾವಣ

ಪಾಪ ತ್ರೇತಾಯುಗದ ರಾವಣನ ಸೃಷ್ಠಿ ಮಾಡುವಾಗ ಬ್ರಹ್ಮನಿಗೆ ಟೈಮ್ಇರಲ್ಲಿಲ್ಲವೆನೋ ಅದಕ್ಕಾಗಿ 10 ಕೈ, 10 ತಲೆಗೆ ಸುತ್ತಾಗಿಬಿಟ್ಟಿದ್ದಾನೆ.
ಆದರೆ ಆಧುನಿಕ ಬ್ರಹ್ಮರಿಗೆ ಸಾಕಷ್ಟು ಸಮಯವಿದ್ದಂತಿದೆ, ಇಲ್ನೋಡಿ ವ್ಯಕ್ತಿಗೆ ಎಷ್ಟು ಎಷ್ಟೊಂದು ಕೈಗಳನ್ನು ಸೃಷ್ಟಿಸಿದ್ದಾರೆ.
ಕಂಪ್ಯೂಟರ್ ಕರಾಮತ್ತು ಏನೆಲ್ಲಾ ಮಾಡುತ್ತೆ ಮಾರಾಯ್ರೇ

ನಮಗೂ ಇಷ್ಟೊಂದು ಕೈಗಳಿದಿದ್ದರೆ, ಜೊತೆಗೆ ಸೂರ್ಯಮುಳುಗದೆ ಇದ್ದರೆ........
ಈಗಾಗಲೇ ಮನುಷ್ಯರಿಗೆ ಮನೆ ಹಾಳು ಮಾಡುವ ಬುದ್ದಿ ಬಂದಿದೆ. ಅಷ್ಟು ಕೈಗಳ್ಳಿದರೆ ಕಲ್ಪನೆಯೇ ಅಸಾಧ್ಯ ಬಿಟ್ಟಾಕಿ.
ಈಗ ಇವನ ಜೋತೆ ಹೊಡೆದಾಟಕ್ಕೆ ಹೋಗುವ ತಾಕತ್ತು ಇದೆಯಾ ಮೊದಲು ಅದನ್ನೇಳ್ಳಿ
............?

ಮದುವೆಯಲ್ಲಿ ಮಾಜಾ ತರುವ ಘಟನೆಗಳು

ಹುಚ್ಚನ ಸಾವು


ಕನ್ನಡದ ಯಾವುದೋ ಒಂದು ಚಿತ್ರದಲ್ಲಿ ಶ್ರೀಮಂತ ನಾಯಕ ಕಾರ್ಮಿಕರನ್ನು ಕುರಿತು "ಕೆಲಸದ ವೇಳೆ ನಿದ್ದೆ, ಮಾಡುತ್ತೀರಾ, ನಿದ್ದೆ ಮಾಡುವಾಗ ಕೆಲಸ ಮಾಡುತ್ತೀರಾ" ಎಂದು ಲೇವಡಿ ಮಿಶ್ರಿತ ಟೀಕೆ ಮಾಡುತ್ತಾನೆ. ಈ ಚಿತ್ರಾ ನೋಡಿ
ಏನೋ .... ? ಮಾಡುವ ಜಾಗದಲ್ಲಿ, ಮತ್ತಿನ್ನೇನನೋ ಮಾಡುತ್ತಿರುವ ಈ ವ್ಯಕ್ತಿಯ ಬಗ್ಗೆ ಏನ್ ಹೇಳಬೇಕೋ ನೀವೆ ತೀಮಾನಿಸಿ.

Wednesday, September 2, 2009

48 ದಿನಗಳ ಕೋಮಾದ ನಂತರ
ಇಹಲೋಕ ತೊರೆದ ನಾಗರಾ ಜಂಬಗಿ
ಜೈಲಿನ ಸಹ ಕೈದಿಗಳಿಂದಲೇ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಹುಬ್ಬಳ್ಳಿ- ಧಾರವಾಡ ನ್ಯಾಯಾಲಯದ ಸ್ಫೋಟದ ಪ್ರಮುಖ ಆರೋಪಿ ನಾಗರಾಜ ಜಂಬಗಿ ಬುಧವಾರ ಮಧ್ಯಾಹ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತಪಟ್ಟಿದ್ದಾನೆ ಎನ್ನುವುದಕ್ಕಿಂತ ಕೊಲ್ಲಲ್ಪಟ್ಟಿದ್ದಾನೆ ಎನ್ನುವುದು ಸೂಕ್ತವೆನೋ.
 ಬಾಂಬ್‌ ಸ್ಫೋಟ ಸೇರಿದಂತೆ ಹಲವಾರು ಕ್ರಿಮಿನಲ್‌ ಪ್ರಕರಣಗಳಿಗಾಗಿ ಬಾಗಲಕೋಟೆಯ ಜಿಲ್ಲೆಯ ಕಾರಾಗೃಹದಲ್ಲಿ ವಿಚಾರಣಾ ಖೈದಿಯಾಗಿದ್ದ ನಾಗರಾಜ ಜಂಬಗಿಯ ಮೇಲೆ ಜುಲೈ 18ರಂದು ಆತನ ಸಹ ಕೈದಿಗಳಾದ ಬಸವರಾಜ ಯಮುನಪ್ಪ ಡಿಗ್ಗಿ ಮತ್ತು ಬಿ.ಹನುಮಂತಪ್ಪ ರೂಗಿ ಎಂಬವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಗಂಭೀರ ಸ್ವರೂಪದ ಗಾಯಗಳಾಗಿದ್ದ ಜಂಬಗಿ ಅಂದಿನಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೋಮಾ ಅವಸ್ಥೆಯಲ್ಲಿಯೇ ಇದ್ದನು. ಇತ್ತೀಚೆಗೆ ಚಿಕಿತ್ಸೆಗೆ ಸ್ಪಂದಿಸತೊಡಗಿದ್ದ ಜಂಬಗಿಯ ದೇಹ 2009ರ ಸೆಪ್ಟಂಬರ್ 2ರಂದು ಬೆಳಗ್ಗೆ ಅನಿರೀಕ್ಷಿತವಾಗಿ ನಿಶ್ಚೇತನಗೊಂಡು ಮಧ್ಯಾಹ್ನದ ವೇಳೆಗೆ ವೈದ್ಯರ ಪ್ರಯತ್ನ ಫಲ ನೀಡದೆ ಆತ ಸಾವನಪ್ಪಿದ್ದಾನೆ.
"ಹಲವಾರು ಅಪರಾಧ ಕೃತ್ಯಗಳಲ್ಲಿ ಜಂಬಗಿಯೊಂದಿಗೆ ಕೈಜೋಡಿಸಿದ್ದ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಿಸಲು ಹಣ ನೀಡಲಿಲ್ಲ" ಎಂಬ ಕಾರಣಕ್ಕೆ ಹನುಮಂತಪ್ಪ ರೂಗಿ ಜಗಳ ತೆಗೆದಿದ್ದ. ಇದಕ್ಕೆ ಪ್ರತಿಯಾಗಿ ಜಂಬಗಿಯೂ ಧಮಕಿ ಹಾಕಿದ್ದ. ಜಂಬಗಿಯ ವಿರುದ್ಧ ಅಸಮಾಧಾನ ಹೊಂದಿದ್ದ ಇತರ ಕೈದಿಗಳು ಒಟ್ಟಾಗಿ ಮಧ್ಯಾಹ್ನದ ವೇಳೆ ಏಕಾಏಕಿ ಹಲ್ಲೆ ನಡೆಸಿ ಕಲ್ಲಿನಿಂದ ತಲೆಯನ್ನು ಜಜ್ಜಿದ್ದರು. ಒಂದು ಕಣ್ಣಿನ ಪಾರ್ಶ್ವಭಾಗ ಸಂಪೂರ್ಣ ಹಾನಿಗೆ ಒಳಗಾಗಿ, ತಲೆಗೆ ಗಂಭೀರ ಸ್ವರೂಪದ ಪೆಟ್ಟಾಗಿ ಜಂಬಗಿ ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದ. ಹುಬ್ಬಳ್ಳಿಯ ಕಿಮ್ಸನ ಆಸ್ಪತ್ರೆಗೆ ದಾಖಲಿಸಲಾಗಿತ್ತು. 48 ದಿನಗಳ ಕಾಲ ಕೋಮಾವಸ್ಥೆಯಲ್ಲಿದ್ದ ಆರೋಪಿ ಇಹ ಲೋಕ ತ್ಯಜಿಸಿದ್ದಾನೆ.
ಜಂಬಗಿಯ ಬಳಿ ಮಾಲೆಗಾಂವ್‌ ಸ್ಫೋಟ ಸೇರಿ ಹಲವು ಕ್ರಿಮಿನಲ್‌ ಚಟುವಟಿಕೆಗಳ ಕುರಿತಂತೆ ಮಾಹಿತಿಗಳಿದ್ದು, ಇದು ಹೊರ ಬರದಂತೆ ನೋಡಿಕೊಳ್ಳುವ ಉದ್ದೇಶದಿಂದ ವ್ಯವಸ್ಥಿತವಾಗಿ ಕೊಲೆ ನಡೆಸಲಾಗಿದೆ ಎನ್ನುವ ಶಂಕೆ ವ್ಯಾಪಕವಾಗಿ ಕೇಳಿ ಬರುತ್ತಿದೇ. ಒಂದುಕಾಲದಲ್ಲಿ ಶ್ರೀರಾಮಸೇನೆಯ ನಾಯಕ ಪ್ರಮೋದ್‌ ಮುತಾಲಿಕ್‌ರ ಆಪ್ತ ಬಳಗದಲ್ಲಿ ಜಂಬಗಿ ಗುರುತಿಸಿಕೊಂಡಿದ್ದ. ಆತನ ಕೊಲೆಯತ್ನದಲ್ಲಿ ರಾಮಸೇನೆಯ ಪಾತ್ರವಿದೆ ಎಂದು ವಿವಿಧ ಸಂಘಟನೆಗಳು ಈ ಹಿಂದೆ ಆರೋಪಿಸಿದ್ದವು.ಬಾಗಲಕೋಟೆಯ ನವನಗರ ಪೊಲೀಸರು ಹಲ್ಲೆ ನಡೆಸಿದ ಬಸವರಾಜ ಡಿಗ್ಗಿ, ಹನುಮಂತಪ್ಪ ರೂಗಿಯವರ ವಿರುದ್ಧ ಈ ಮೊದಲು ದಾಖಲಿಸಿದ್ದ ಕೊಲೆಯತ್ನ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿಗಣಿಸಿ ವಿಚಾರಣೆ ಮುಂದುವರಿಸಿದ್ದಾರೆ.
ಹಿನ್ನೆಲೆ: 2008 ಮೇ.10ರಂದು ನಡೆದಿದ್ದ ಹುಬ್ಬಳ್ಳಿ-ಧಾರವಾಡ ಜಿಲ್ಲಾ ನ್ಯಾಯಾಲಯ ಸ್ಫೋಟ ಮತ್ತು ಅದೇ ವರ್ಷ ಸೆ.26ರಂದು ಧಾರವಾಡ ಬಳಿಯ ವೆಂಕಟಾಪುರ ರಾಷ್ಟ್ರೀಯ ಹೆದ್ದಾರಿ ಸ್ಫೋಟ ಯತ್ನ ಸೇರಿದಂತೆ ಹಲವಾರು ಕೊಲೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಕ್ಕಾಗಿ ನಾಗರಾಜ ಹೊಳೆ ಬಸಪ್ಪ ಜಂಬಗಿ, ಬಸವರಾಜ ಹನುಮಂತಪ್ಪ ರೂಗಿ (20), ರಮೇಶ್‌ ಬೈರೂಬಾ ಪದರ್ (24), ಬಸವರಾಜ ಯಮುನಪ್ಪ ಡಿಗ್ಗಿ (22), ಲಿಂಗರಾಜ್‌ ಗುರುನಾಥ್‌ ಜಾಲಗಾರ್ (24), ಮಂಜುನಾಥ್‌ ಅಂಬಣ್ಣ ಜಿಂಜವಾಡಗಿ (19), ದಿಪಕ್‌ ಪರುಶರಾಮ್‌ ಗೋವಿಂದಕರ್ (28)ರನ್ನು ಬಾಗಲಕೋಟೆ ಜಿಲ್ಲೆಯ ನವನಗರ ಪೊಲೀಸರು ಬಂಧಿಸಿದ್ದರು.
 2008ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನಡೆದ ಹುಬ್ಬಳ್ಳಿ-ಧಾರವಾಡ ನ್ಯಾಯಾಲಯ ಸ್ಫೋಟ ಪ್ರಕರಣದಲ್ಲಿ ಪ್ರಮುಖ ವ್ಯಕ್ತಿಗಳ ಕೈವಾಡವಿದೆ ಎಂದು ಹೇಳಲಾಗಿತ್ತು. ಬಂಧನದ ನಂತರ ಜಾಮೀನು ಕೊಡಿಸಲು ತಾವು ನಂಬಿಕೊಂಡಿರುವ ಮುಖಂಡರು ನೆರವಾಗಲಿಲ್ಲ ಎಂಬ ಅಸಮಾಧಾನದಿಂದ ಕುದಿಯುತ್ತಿದ್ದ ನಾಗರಾಜ ಜಂಬಗಿ ನ್ಯಾಯಾಲಯದ ವಿಚಾರಣೆ ವೇಳೆ ಬಾಂಬ್‌ ಸ್ಫೋಟಕ್ಕೆ ಪ್ರೇರಣೆ ನೀಡಿದ ಪ್ರಮುಖರೆಲ್ಲರ ಹೆಸರನ್ನು ಬಹಿರಂಗ ಪಡಿಸುವುದಾಗಿ ಎಚ್ಚರಿಕೆ ನೀಡಿದ್ದ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಜಂಬಗಿಯ ಸಹಚರರಿಂದಲೇ ಜೈಲಿನಲ್ಲಿ ಹಲ್ಲೆ ನಡೆಸಿ ಹತ್ಯೆ ಮಾಡುವ ಯತ್ನ ನಡೆದಿತ್ತು ಅದು ಯಶಸ್ವಿಯೂ ಆಯಿತು ಎಂದು ಮೂಲಗಳು ಶಂಕಿಸಿವೆ.
ಜಂಬಗಿಯ ಸಾವಿನೊಂದಿಗೇ ಬಾಂಬ ಸ್ಫೋಟದ ಗಂಭೀರ ಸತ್ಯಗಳು ನೆಪಥ್ಯಕ್ಕೆ ಸರಿದಂತಾಗಿದೆ ಎಂದು ಹೇಳಲಾಗಿದೆ.
ಕೃಪೆಃ ವಾರ್ತಾಭಾರತಿ.

Tuesday, September 1, 2009

ಈಗಲೂ ಕಾಡುವಾ ಅಜ್ಜಿ ಕಥೆಗಳು
ಒಂದೂರಿನಲ್ಲಿ ಒಬ್ಬ ರಾಜಕುಮಾರ ಇದ್ದನಂತೆ, ಏಳು ಸಮುದ್ರಾಚೆ ಕಾಮನಬಿಲ್ಲಿನ ಮೇಲೆ ಸ್ವರ್ಗದಂತ ರಾಜ್ಯದ ರಾಜನ ಮಗಳು ರಾಜಕುಮಾರಿ, ಏಳು ಮಲ್ಲಿಗೆ ತೂಕದ ಅಂದಗಾತಿ,
ಅಮ್ಮನ ಅಣತಿಯಂತೆ ರಾಜಕುಮಾರಿ ಕರೆ ತರಲು ರಾಜಕುಮಾರ ಬಿಸಿಲುಗುದುರೆ ಏರಿ ಹೋಗುತ್ತಾನೆ. ಅಸಹಾಯಕ ಅಜ್ಜಿಯ ಸೇವೆಯಿಂದ ಆರಂಭಿಸಿ, ರಾಜಕುಮಾರ ಮಾಡಿದ ಪುಣ್ಯದ ಕಾರ್ಯಗಳು ಸ್ವರ್ಗದ ರಾಜ್ಯ ತಲುಪಲು ನೆರವಾಗುತ್ತವೆ........

ಅಜ್ಜಿ ಕಥೆ ಹೇಳುತ್ತಿದ್ದರೆ ನಮಲ್ಲಿ ರಾಜಕುಮಾರನ ಅಹಗಾವನೆಯಾಗುತ್ತಿತ್ತು.
ಯಾವುಒದೋ ಬ್ಲಾಗ್ ಓದುತ್ತಿರುವಾಗ ಅಜ್ಜಿ ಕಥೆಯ ನೆನಪಾಯಿತು.
ಇದ್ದಕ್ಕಿದ್ದಾಗೆ ಸ್ವರ್ಣದಿನಗಳನ್ನು ಮಿಸ್ ಮಾಡಿಕೊಂಡ painful feelings.
ಎಲ್ಲಿ ಹೋದವು ಅಜ್ಜಿ ಕಥೆಗಳು, ಎಳೆವಯಸ್ಸಿನಲ್ಲೇ ಹಿರೋಯಿಸಂ ಬೆಳೆಸುತ್ತಿದ್ದ ಆ ದಿನದ ಕಥೆಗಳೆಲ್ಲಿ, ಈಗಿನ ಮಕ್ಕಳ ಬೋಜ್ಜು ಬೆಳೆಸುತ್ತಿರುವ ಡರ್ಟಿ ಟಿ.ವಿ., ಕಂಪ್ಯೂಟರ್ ಗಳೆಲ್ಲಿ.

ತಲೆಗೂದಲಲ್ಲಿ ಬೆರಳಾಡಿಸುತ್ತಾ ಅಜ್ಜಿ ಕಥೆ ಹೇಳುತ್ತಿರುವಾಗಲೇ ನಿದ್ರೆಯ ಮಡಿಲು ಸೇರುತ್ತಿದ್ದ ದಿನಗಳನ್ನು ನೆನೆಪಿಸಿಕೋಳ್ಳುತ್ತಲೇ....
ಮತ್ತೊಮ್ಮೆ ಆ ದಿನಗಳಿಗಾಗಿ ನಿರೀಕ್ಷಿಸುತ್ತಾ...................

Friday, August 28, 2009

ಕದ್ದ ಹಾಸ್ಯದ ತುಣುಕುಗಳು


ಟಿವಿಎಸ್‌ನಲ್ಲಿ ಬಂದೆ, ಹಾಯ್ ಅಂದಳು.
ಪಲ್ಸರ್‌ನಲ್ಲಿ ಬಂದೆ, ಹಲೋ ಅಂದಳು.
ಕಾರ್‌ನಲ್ಲಿ ಬಂದೆ, ಡಾರ್ಲಿಂಗ್ ಅಂದಳು.
ಇದೆಲ್ಲ ಬಾಡಿಗೆದ್ದು ಅಂದೆ, ಹೌದಾ ಅಣ್ಣಾ ಅಂದಳು..!


ಹುಂಜ ಮತ್ತು ಹೇಂಟೆಯ ನಡುವೆ ನಡೆದ ಪ್ರೇಮಪೂರಿತ ಸಂಭಾಷಣೆಯಿದು. ನೀವೂ ಓದಿ ತಿಳಿದುಕೊಳ್ಳಿ.
ಹುಂಜ: ನಾನು ನಿನ್ನ ಪ್ರೀತಿಸ್ತಿದ್ದೀನಿ.. ನಿಂಗೋಸ್ಕರ ಏನ್ ಬೇಕಾದ್ರೂ ಮಾಡ್ತೀನಿ.
ಹೇಂಟೆ: ನಿಜವಾಗಿಯೂ ನಾನು ಏನು ಹೇಳಿದ್ರೂ ಮಾಡ್ತೀಯಾ?
ಹುಂಜ: ಹೌದು ಡಾರ್ಲಿಂಗ್.. ಏನು ಮಾಡ್ಬೇಕು ಹೇಳು?
ಹೇಂಟೆ: ಹಾಗಿದ್ರೆ ಒಂದು ಮೊಟ್ಟೆ ಇಡು ನೋಡೋಣ..!

ವಿಮಾನದಲ್ಲಿದ್ದ ಸೆಕ್ಸೀ ಗಗನಸಖಿಯನ್ನು ನೋಡಿದ ಯುವಕನೊಬ್ಬ...
ಯುವಕ: ನಿಮ್ಮ ಹೆಸರೇನು?
ಗಗನಸಖಿ: ಮಿಸ್ ಬೆಂಜ್
ಯುವಕ: ಲವ್ಲೀ ನೇಮ್.. ಮರ್ಸಿಡೆಸ್ ಬೆಂಜ್‌ಗೂ ನಿಂಗೂ ಸಂಬಂಧ ಇದ್ಯಾ?
ಗಗನಸಖಿ: ಬರೀ ರೇಟು ಮಾತ್ರ..!

ಟೀಚರ್: ಲವ್ ಮಾಡಿ ಮದುವೆ ಆಗೋದು ಒಳ್ಳೇದೋ ಅಥವಾ ಮದುವೆಯಾಗಿ ಲವ್ ಮಾಡೋದು ಒಳ್ಳೇದೋ?
ಗುಂಡ: ಮದುವೆ ಆದಮೇಲೆ ಲವ್ ಮಾಡೋದೇ ಒಳ್ಳೇದು ಮೇಡಂ. ಆದ್ರೆ ಹೆಂಡತಿಗೆ ಗೊತ್ತಾಗ್ಬಾರ್ದು ಅಷ್ಟೇ..!

ಇದೊಂದು ವಿಚಿತ್ರ ಪ್ರಶ್ನೆ. ನೀವು ತೀರಾ ಬುದ್ಧಿವಂತರಾಗಿದ್ರೆ ಮಾತ್ರ ಪೂರ್ತಿ ಓದಿ.
ಬಾಲಿವುಡ್‌ನಲ್ಲಿ ಬಾಯ್‌ಫ್ರೆಂಡೇ ಇಲ್ಲದೇ ಇರೋ ನಾಯಕಿ ಯಾರು?
- ಕೋಯಿ ನಾ ಮಿತ್ರ..!

ದೇವರ ಹುಂಡಿಗೆ 1 ರೂಪಾಯಿ ಹಾಕಿ, 'ದೇವರೇ.. ನನಗೆ ಒಳ್ಳೆ ಫ್ರೆಂಡ್ ಕೊಡಪ್ಪ' ಅಂತ ಕೇಳಿದೆ.
ಅದಕ್ಕೆ ದೇವರು ನಿನ್ನನ್ನು ತೋರಿಸಿ ಹೇಳಿದ್ರು, 'ಮಗು.. 1 ರೂಪಾಯಿಗೆ ಇದಕ್ಕಿಂತ ಒಳ್ಳೆ ಫ್ರೆಂಡ್ ಸಿಗಲ್ಲ' ಅಂದ..!


ಹೆಂಡತಿ: ಶಹಜಹಾನ್ ತನ್ನ ಹೆಂಡತಿಯ ಮೇಲಿನ ಪ್ರೀತಿಗಾಗಿ ತಾಜ್‌ಮಹಲ್ ಕಟ್ಟಿದ. ನಾನು ಸತ್ರೆ ನೀವೇನು ಕಟ್ತೀರಾ?
ಗಂಡ: ತಾಳಿ.. ನಿನ್ನ ತಂಗಿಯ ಕುತ್ತಿಗೆಗೆ..

ನಿನ್ನೆ ರಾತ್ರಿ ಏಳು ದೆವ್ವಗಳು ನನ್ನ ಬಳಿ ಬಂದಿದ್ವು. ನಿಮ್ಮ ದಾರಿ ತಪ್ಪಿದೆ,
ಅತಿ ಬುದ್ಧಿವಂತ ನಾನನ್ನಲ್ಲ ಎಂದು ನಾನು ನಿನ್ನ ಅಡ್ರೆಸ್ ಕೊಟ್ಟೆ.
ಮೂರ್ಖ ದೆವ್ವಗಳು ಅದನ್ನು ನಂಬಿ ನನ್ನನ್ನು ಬಿಟ್ಟವು..!


ಹುಡುಗಿ: ಒಂದೇ ಒಂದು ಮುತ್ತು ಕೊಟ್ಟರೆ ಸಾಕು.. ನಾನೆಂದೂ ನಿನ್ನವಳಾಗಿರುತ್ತೇನೆ.
ಹುಡುಗ: ಮೊದಲೇ ಹೇಳಿದ್ದಕ್ಕೆ ತುಂಬಾ ಥ್ಯಾಂಕ್ಸ್..!

ಸಂತಾ ಮತ್ತು ಆತನ ಹೆಂಡತಿ ನಗ್ನ ಕಲಾ ಪ್ರದರ್ಶನ ವೀಕ್ಷಣೆಗೆ ಹೋಗಿದ್ದರು. ಅಲ್ಲಿ ತನ್ನ ಹೆಂಡತಿಯ ಚಿತ್ರವನ್ನು ನೋಡಿ ಪ್ರಶ್ನಿಸಲಾರಂಭಿಸಿದ.
ಸಂತಾ: ನಿಜಕ್ಕೂ ಚಿತ್ರ ಬಿಡಿಸಲು ನೀನು ಪೋಸ್ ಕೊಟ್ಟಿದ್ಯಾ?
ಹೆಂಡತಿ: ನಿಂಗೇನು ಹುಚ್ಚು ಹಿಡಿದಿದ್ಯಾ? ಚಿತ್ರ ಬಿಡಿಸೋನು ತನ್ನ ಶುದ್ಧ ಸ್ಮರಣ ಶಕ್ತಿಯಿಂದ ಬಿಡಿಸಿದ್ದಾನೆ.. ಅಷ್ಟೇ..!

ಅವಳಿಗೆ ನಾನು ದಿನಾ ಮೆಸೇಜ್ ಕಳುಹಿಸುತ್ತಿದ್ದೆ.
ನೀ ಸುಂದರವೆಂದು, ನೀ ನನ್ನ ಉಸಿರೆಂದು,
ನೀ ನನ್ನ ಜೀವವೆಂದು, ನೀ ನನ್ನ ಜೀವನವೆಂದು,
ನೀ ನನ್ನ ಬದುಕೆಂದು, ನೀನೇ ಎಲ್ಲವೆಂದು..
ಅವಳು ರಿಪ್ಲೈ ಮಾಡಿದಳು..
ಅಣ್ಣ ನಿಮಗೆ ಎಸ್‌ಎಂಎಸ್ ಫ್ರೀನಾ ಎಂದು..!

Thursday, August 27, 2009

ಎಲ್ ಟಿ ಟಿ ಇ ಪ್ರಭಾಕರನ್ ಪಕ್ಕದಲ್ಲಿ ಯಡಿಯೂರಪ್ಪ
ಪ್ರತ್ಯೇಕ ತಮಿಳುರಾಷ್ಟ್ರಕ್ಕಾಗಿ ಹೋರಾಟ ನಡೆಸಿ, ಶ್ರೀಲಂಕಾ ಸೇನಾ ಕಾರ್ಯಚರಣೆಯಲ್ಲಿ ಮೃತಪಟ್ಟರೆಂದು ಹೇಳಲಾದ ಎಲ್‌ಟಿಟಿಇ ನಾಯಕ ಪ್ರಭಾಕರನ್‌ ಭಾವಚಿತ್ರದೊಂದಿಗೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನ ಭಾವಚಿತ್ರವನ್ನು ಮುದ್ರಿಸಿರುವ ಬ್ಯಾನರ್ ವೊಂದು ಇತ್ತೀಚೆಗೆ ನಡೆದ ತಿರುವಳ್ವರ್ ಪ್ರತಿಮೆ ಅನಾವರಣದಲ್ಲಿ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮ ನಡೆಯುತ್ತಿದ್ದ ಬೆಂಗಳೂರಿನ ಹಲಸೂರು ಕೆರೆ ಸಮೀಪದ ಮೈದಾನದಿಂದ ಸ್ವಲ್ಪದೂರದಲ್ಲಿನ ಲಾವಣ್ಯ ಥಿಯೆಟರ್ ಬಳಿ ಮರವೊಂದಕ್ಕೆ ಕಟ್ಟಲಾಗಿದ್ದ ಪ್ಲೆಕ್ಷ್ ನಿಂದ ತಯಾರಿಸಿದ ಈ ಬ್ಯಾನರ್ ನಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕ್ ರ್, ತಮಿಳುನಾಡಿನ ದಾರ್ಶನಿಕ ಪೆರಿಯಾರ್‌, ಸ್ವಾತಂತ್ರ ಸೇನಾನಿ ಶುಭಾಷ್‌ ಚಂದ್ರಬೋಸ್‌, ಕ್ಯೂಬಾ ಕಾಂತ್ರಿಯ ನೇತಾರ ಚೆ-ಗುವಾರ, ಎಲ್‌ಟಿಟಿಇ ನಾಯಕ ವೇಟ್ಟು ಪಿಳೈಪ್ರಭಕರನ್‌ರ ಭಾವಚಿತ್ರಗಳನ್ನು ಮೊದಲ ಸಾಲಿನಲ್ಲಿ ಹಾಕಲಾಗಿತ್ತು. ಕೆಳಗಿನ ಸಾಲಿನಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಖ್ಯಾತನಟ ಎಂ.ಜಿ.ರಾಮಚಂದ್ರನ್‌ರ ಭಾವಚಿತ್ರದ ಪಕ್ಕ ಕರ್ನಾಟಕದ ಮುಖ್ಯಮಂತಾರಿ ಯಡಿಯೂರಪ್ಪನವರ ಫೋಟೋವನ್ನು ಮುದ್ರಿಸಲಾಗಿತ್ತು.
ಬ್ಯಾನರ್ ನಲ್ಲಿ ಜನಶಕ್ತಿ ಎಂಬ ತಲೆಬರಹವಿದ್ದು ಮಾತ್ರವಿದ್ದು ಯಾವುದೇ ಸಂಘಟನೆಯ ಹೆಸರು ಇರಲಿಲ್ಲ. ಕೆಳಗೆ ‘ಭಾಷೆ, ಜಾತಿ, ಮತ ಭಾವನೆಯಿಲ್ಲದೆ ತಾನು ಭಾರತೀಯನೆಂದು ನಿರೂಪಿಸಿದ ಭಾರತೀಯ !! ಮಾನ್ಯ ಶ್ರೀ ಯಡಿಯೂರಪ್ಪನವರಿಗೆ ವಿಶ್ವದ ತಮಿಳು ಜನಾಂಗದ ಹಾರ್ಧಿಕ ಅಭಿನಂದನೆಗಳು’ ಎಂದು ಪ್ರಶಂಸಿಸಲಾಗಿತ್ತು.
ನೆರೆಯ ಶ್ರೀಲಂಕ ಸರಕಾರದಿಂದ ಘೋಷಿತ ಅಪರಾಧಿಯಾಗಿ ಸೇನಾ ಕಾರ್ಯಚರಣೆಯಿಂದ ಸಾವನ್ನಪ್ಪಿದ್ದಾರೆ ಎಂದು ನಂಬಲಾದ ಪ್ರಭಾಕರನ್‌ ಭಾವಚಿತ್ರದ ಕೆಳಗೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪ್ರಶಂಸಿಸಲಾಗಿದೆ. ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸುವ ಮಾರ್ಗದಲ್ಲಿಯೇ ಈ ಬ್ಯಾನರ್ ಕಟ್ಟಲಾಗಿತ್ತು. ಸಮೀಪದಲ್ಲೇ ಪೊಲೀಸ್‌ ಅಧಿಕಾರಿಗಳು ಬಂದೋಬಸ್ತಗೆ ನಿಂತಿದ್ದರು.
ಕಲ್ಪನೆ ಕಳೆದುಕೊಂಡವ


ನಾನೊಂದು ಕವಿತೆ ರಚಿಸಬಲ್ಲೆ

ಕವಿತೆಗೆ ಸ್ಪೀರ್ತಿಯಾಗುವವಳು ಇಲ್ಲದೆ

ಕವಿತೆಗೆ ಸಾಲುಗಳು ಹೇಗೆ ಇರಬಲ್ಲವು.......

ಮಳೆತರದ ಮೋಡಗಳಂತೆ,

ಕಣ್ಣಿಲ್ಲದವನ ಮುಂದಿನ ಕನ್ನಡಿಯಂತೆ,

ಕಲ್ಪನೆ ಕಳೆದುಕೊಂಡ ಕವಿಯಂತೆ.......