Friday, September 4, 2009

ಖಾಸಗಿ ಆಸ್ಪತ್ರೆಗಳ ಗುಲಾಮರಾಗಿರುವ ಆರೋಗ್ಯ ಇಲಾಖೆ ಅಧಿಕಾರಿಗಳು

ರಾಜ್ಯದಲ್ಲಿ ಒಂದೆಡೆ ಹಂದಿಜ್ವರದಿಂದ ಜನ ಸಾಯುತ್ತಿದ್ದರೆ, ಮತ್ತೊಂಡೆದೆ ರಾಜ್ಯ ಸರಕಾರ ರೋಗಿಗಳ ಹಿತರಕ್ಷಣೆಗೆ ಬದಲಿಗೆ ಖಾಸಗಿ ಆಸ್ಪತ್ರೆಗಳ ಹಿತಾರಕ್ಷಣೆಗೆ ಟೊಂಕಕಟ್ಟಿ ನಿಂತಿದೆ. ಮಾರಕ ಜ್ವರದಿಂದ ಚೇತರಿಸಿಕೊಳ್ಳದೆ ಸತ್ತವರ ಸಂಖ್ಯೆ ರಾಜ್ಯದಲ್ಲಿ 40 ಗಡಿದಾಟಿದೆ. ಬೆಂಗಳೂರೊಂದರಲ್ಲೇ 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಖಾಸಗಿ ಆಸ್ಪತ್ರೆಗಳು ಹಣದಾಸೆಗೆ ಜನರ ಪ್ರಾಣ ತೆಗೆಯುತ್ತಿವೆ. ಬಹಳಷ್ಟು ಆಸ್ಪತ್ರೆಗಳಿಗೆ ಎಚ್‌1ಎನ್‌1 ಪರೀಕ್ಷೆ ನಡೆಸುವುದೇ ಗೊತ್ತಿಲ್ಲ. ಆದರೂ, ಜ್ವರದಿಂದ ರೋಗಿಗಳ ಸಂಖ್ಯೆ ಹೆಚ್ಚಾಗಿ ಆಸ್ಪತ್ರೆಗಳ ಬೆಡ್‌ ತುಂಬುತ್ತವೆ ಎಂಬ ಕಾರಣಕ್ಕೆ ಸರಕಾರದೊಂದಿಗೆ ಎಂ.ಒ.ಯು ಮಾಡಿಕೊಂಡು, ಚಿಕಿತ್ಸೆ ನೀಡುಲು ಮುಂದಾಗಿದೆ. ಪರೀಕ್ಷೆ ಮಾಡುವುದೇ ಗೊತ್ತಿಲ್ಲದ ಆಸ್ಪತ್ರೆಗಳು ಇನ್ನು  ಪ್ರಾಣವನ್ನು ಉಳಿಸುವುದೇಷ್ಟು ಎಂಬುದನ್ನು ಊಹಿಸಬಹುದು. ರೋಗದ ಬಗ್ಗೆ  ಪ್ರಾಥಮಿಕ ಮಾಹಿತಿಯೂ ಇಲ್ಲದ ವೈದ್ಯರು ರೋಗಿಯ ಬಾಯಿಗೆ ಟ್ಯಾಮಿಫ್ಲ್ಯೊ ಮಾತ್ರೆಗಳನ್ನು ತುರುಕಿ ಇದೇ ಚಿಕಿತ್ಸೆ ಎಂದು ಹಣ ವಸೂಲಿ ಮಾಡುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಸೋಂಕನ್ನು ಗುರುತಿಸದೇ, ಸೂಕ್ತ ಚಿಕಿತ್ಸೆ ನೀಡದಿರುವುದರಿಂದ ಹಂದಿಜ್ವರ ಉಲ್ಬಣಗೊಂಡು ರೋಗಿಯ ಸ್ಥಿತಿ ಚಿಂತಾಜನಕವಾದಾಗ ಪ್ರತಿಷ್ಠಿತ ಎಂದು ಗುರುತಿಸಿಕೊಂಡಿರುವ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಆ ವೇಳೆಗೆ ಎಕ್‌‌ಸಪೈರಿ ಡೆಡ್‌ ಹತ್ತಿರವಾಗಿ ರೋಗಿ ಸಾವನ್ನಪ್ಪುತ್ತಾನೆ.
ಹೆಚ್ಚು ರೋಗಿಗಳು ಸತ್ತೆಗೆ ಆಸ್ಪತ್ರೆಗಳ ಹೆಸರು ಕೆಟ್ಟು ಆದಾಯಕ್ಕೆ ಖೋತಾ ಆಗಬಹುದೆಂಬ ಆತಂಕದಿಂದ ರೋಗಿಗಳ ಸಾವಿನ ಸಂಖ್ಯೆನ್ನು ಮುಚ್ಚಿಟಲು ಯತ್ನಿಸಲಾಗುತ್ತದೆ. ಇದಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಗೋಣೆ ಬಸವನ ಹಾಗೇ ತಲೆ ಆಡಿಸುತ್ತಿದ್ದಾರೆ, ಅದು ಪುಗಸಟ್ಟೆ ಅಲ್ಲ ಎಂಬ ಕುಹಕಕ್ಕೆ, ಸಂಬಂಧಿಸಿದವರೆ ಉತ್ತರ ಹೇಳಬೇಕು.
ರೋಗಿಗಳ ಸಂಖ್ಯೆ ಐದುನೂರರ ಗಡಿದಾಟಿದ್ದರೂ ಗುಣಮಟ್ಟದ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಿಲ್ಲ. ಈಗಾಗಲೇ 83 ಆಸ್ಪತ್ರೆಗಳನ್ನು ಗುರುತಿಸಲಾಗಿದ್ದರೂ ಅವುಗಳಲ್ಲಿ ಕೆಲವು ರೋಗಿಗಳನ್ನು ದಾಖಲಿಸಿಕೊಳ್ಳಲು ಹಿಂಜೆರಿಯುತ್ತಿವೆ. ಚಿಕಿತ್ಸೆಗಾಗಿ ಹೋಗುವ ರೋಗಿಗಳನ್ನು ಎ ಮತ್ತು ಬಿ ಕ್ಯಾಟಗರಿ ಎಂದು ತೀರ್ಮಾನಿಸಿ ಟ್ಯಾಮಿಫ್ಲ್ಯೊ ಔಷಧ ನೀಡಿ ಮನೆಗೆ ಕಳುಹಿಸುತ್ತಿವೆ. ಮಾತ್ರೆಗಳನ್ನು ಸೇವಿಸಿ ಸಾರ್ವಜನಿಕವಾಗಿ ತಿರುಗಾಟುವ ರೋಗಿಗಳಿಂದ ಸೋಂಕು ಇನ್ನಷ್ಟು ವೇಗವಾಗಿ ಹಬ್ಬುತ್ತಿದೆ.
ಇನ್ನು ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಂಡರೂ ಹಣ ಸುಲಿಗೆ ಮಾಡುಲಿಕ್ಕಾಗಿ ಚಿಕಿತ್ಸೆಯನ್ನು ಮೆಗಾಸಿರಿಯಲ್‌ ರೀತಿ ಎಳೆದು ರೋಗಿಯನ್ನು ಸಾಯಿಸುತ್ತಿವೆ. ಪರೀಕ್ಷಾ ಕಿಟ್‌ಗೆ ತಗಲುವ 2 ಸಾವಿರ ರೂಪಾಯಿ ವೆಚ್ಚವನ್ನು ಭರಿಸುವುದಾಗಿ ಸರಕಾರ ಹೇಳಿದೆಯಾದರೂ ಅದನ್ನು ಕೆಲವು ಆಸ್ಪತ್ರೆಗಳು ರೋಗಿಗಳಿಂದಲೇ ವಸೂಲಿ ಮಾಡುತ್ತಿವೆ. ಸರಕಾರದಿಂದ ಹಣ ಬಂದಾಗ ನೀವೆ ತೆಗೆದುಕೊಳ್ಳಿ ಎಂಬ ಕಾರಣವನ್ನು ಆಸ್ಪತ್ರೆಯ ವೈದ್ಯರು ಹೇಳುತ್ತಿದ್ದಾರೆ. ಇದರಿಂದಾಗಿ ಸರಕಾರ ಆರ್ಥಿಕ ನೆರವು ನೀಡುತ್ತಿದ್ದರೂ ಅದು ಬಡರೋಗಿಗಳಿಗೆ ತಲುಪುತ್ತಿಲ್ಲ.
ಇಂತಹ ಆಸ್ಪತ್ರೆಗಳ ವಿರುದ್ಧ ದೂರು ನೀಡಿದ್ದರೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುವ ಬದಲಿಗೆ ದೂರು ನೀಡಿದವರಿಗೆ ಆಸ್ಪತ್ರೆಗಳಿಂದ ಹಣ ಕೊಡಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಉಳಿದ ಸಾಮಾನ್ಯ ರೋಗಿಗಳು ಈ ಸಮಸ್ಯೆಯನ್ನು ನಿರಂತರವಾಗಿ ಅನುಭವಿಸುತ್ತಲೇ ಇದ್ದಾರೆ.

Thursday, September 3, 2009

ಅಧುನಿಕ ರಾವಣ

ಪಾಪ ತ್ರೇತಾಯುಗದ ರಾವಣನ ಸೃಷ್ಠಿ ಮಾಡುವಾಗ ಬ್ರಹ್ಮನಿಗೆ ಟೈಮ್ಇರಲ್ಲಿಲ್ಲವೆನೋ ಅದಕ್ಕಾಗಿ 10 ಕೈ, 10 ತಲೆಗೆ ಸುತ್ತಾಗಿಬಿಟ್ಟಿದ್ದಾನೆ.
ಆದರೆ ಆಧುನಿಕ ಬ್ರಹ್ಮರಿಗೆ ಸಾಕಷ್ಟು ಸಮಯವಿದ್ದಂತಿದೆ, ಇಲ್ನೋಡಿ ವ್ಯಕ್ತಿಗೆ ಎಷ್ಟು ಎಷ್ಟೊಂದು ಕೈಗಳನ್ನು ಸೃಷ್ಟಿಸಿದ್ದಾರೆ.
ಕಂಪ್ಯೂಟರ್ ಕರಾಮತ್ತು ಏನೆಲ್ಲಾ ಮಾಡುತ್ತೆ ಮಾರಾಯ್ರೇ

ನಮಗೂ ಇಷ್ಟೊಂದು ಕೈಗಳಿದಿದ್ದರೆ, ಜೊತೆಗೆ ಸೂರ್ಯಮುಳುಗದೆ ಇದ್ದರೆ........
ಈಗಾಗಲೇ ಮನುಷ್ಯರಿಗೆ ಮನೆ ಹಾಳು ಮಾಡುವ ಬುದ್ದಿ ಬಂದಿದೆ. ಅಷ್ಟು ಕೈಗಳ್ಳಿದರೆ ಕಲ್ಪನೆಯೇ ಅಸಾಧ್ಯ ಬಿಟ್ಟಾಕಿ.
ಈಗ ಇವನ ಜೋತೆ ಹೊಡೆದಾಟಕ್ಕೆ ಹೋಗುವ ತಾಕತ್ತು ಇದೆಯಾ ಮೊದಲು ಅದನ್ನೇಳ್ಳಿ
............?

ಮದುವೆಯಲ್ಲಿ ಮಾಜಾ ತರುವ ಘಟನೆಗಳು

ಹುಚ್ಚನ ಸಾವು


ಕನ್ನಡದ ಯಾವುದೋ ಒಂದು ಚಿತ್ರದಲ್ಲಿ ಶ್ರೀಮಂತ ನಾಯಕ ಕಾರ್ಮಿಕರನ್ನು ಕುರಿತು "ಕೆಲಸದ ವೇಳೆ ನಿದ್ದೆ, ಮಾಡುತ್ತೀರಾ, ನಿದ್ದೆ ಮಾಡುವಾಗ ಕೆಲಸ ಮಾಡುತ್ತೀರಾ" ಎಂದು ಲೇವಡಿ ಮಿಶ್ರಿತ ಟೀಕೆ ಮಾಡುತ್ತಾನೆ. ಈ ಚಿತ್ರಾ ನೋಡಿ
ಏನೋ .... ? ಮಾಡುವ ಜಾಗದಲ್ಲಿ, ಮತ್ತಿನ್ನೇನನೋ ಮಾಡುತ್ತಿರುವ ಈ ವ್ಯಕ್ತಿಯ ಬಗ್ಗೆ ಏನ್ ಹೇಳಬೇಕೋ ನೀವೆ ತೀಮಾನಿಸಿ.

Wednesday, September 2, 2009

48 ದಿನಗಳ ಕೋಮಾದ ನಂತರ
ಇಹಲೋಕ ತೊರೆದ ನಾಗರಾ ಜಂಬಗಿ
ಜೈಲಿನ ಸಹ ಕೈದಿಗಳಿಂದಲೇ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಹುಬ್ಬಳ್ಳಿ- ಧಾರವಾಡ ನ್ಯಾಯಾಲಯದ ಸ್ಫೋಟದ ಪ್ರಮುಖ ಆರೋಪಿ ನಾಗರಾಜ ಜಂಬಗಿ ಬುಧವಾರ ಮಧ್ಯಾಹ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತಪಟ್ಟಿದ್ದಾನೆ ಎನ್ನುವುದಕ್ಕಿಂತ ಕೊಲ್ಲಲ್ಪಟ್ಟಿದ್ದಾನೆ ಎನ್ನುವುದು ಸೂಕ್ತವೆನೋ.
 ಬಾಂಬ್‌ ಸ್ಫೋಟ ಸೇರಿದಂತೆ ಹಲವಾರು ಕ್ರಿಮಿನಲ್‌ ಪ್ರಕರಣಗಳಿಗಾಗಿ ಬಾಗಲಕೋಟೆಯ ಜಿಲ್ಲೆಯ ಕಾರಾಗೃಹದಲ್ಲಿ ವಿಚಾರಣಾ ಖೈದಿಯಾಗಿದ್ದ ನಾಗರಾಜ ಜಂಬಗಿಯ ಮೇಲೆ ಜುಲೈ 18ರಂದು ಆತನ ಸಹ ಕೈದಿಗಳಾದ ಬಸವರಾಜ ಯಮುನಪ್ಪ ಡಿಗ್ಗಿ ಮತ್ತು ಬಿ.ಹನುಮಂತಪ್ಪ ರೂಗಿ ಎಂಬವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಗಂಭೀರ ಸ್ವರೂಪದ ಗಾಯಗಳಾಗಿದ್ದ ಜಂಬಗಿ ಅಂದಿನಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೋಮಾ ಅವಸ್ಥೆಯಲ್ಲಿಯೇ ಇದ್ದನು. ಇತ್ತೀಚೆಗೆ ಚಿಕಿತ್ಸೆಗೆ ಸ್ಪಂದಿಸತೊಡಗಿದ್ದ ಜಂಬಗಿಯ ದೇಹ 2009ರ ಸೆಪ್ಟಂಬರ್ 2ರಂದು ಬೆಳಗ್ಗೆ ಅನಿರೀಕ್ಷಿತವಾಗಿ ನಿಶ್ಚೇತನಗೊಂಡು ಮಧ್ಯಾಹ್ನದ ವೇಳೆಗೆ ವೈದ್ಯರ ಪ್ರಯತ್ನ ಫಲ ನೀಡದೆ ಆತ ಸಾವನಪ್ಪಿದ್ದಾನೆ.
"ಹಲವಾರು ಅಪರಾಧ ಕೃತ್ಯಗಳಲ್ಲಿ ಜಂಬಗಿಯೊಂದಿಗೆ ಕೈಜೋಡಿಸಿದ್ದ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಿಸಲು ಹಣ ನೀಡಲಿಲ್ಲ" ಎಂಬ ಕಾರಣಕ್ಕೆ ಹನುಮಂತಪ್ಪ ರೂಗಿ ಜಗಳ ತೆಗೆದಿದ್ದ. ಇದಕ್ಕೆ ಪ್ರತಿಯಾಗಿ ಜಂಬಗಿಯೂ ಧಮಕಿ ಹಾಕಿದ್ದ. ಜಂಬಗಿಯ ವಿರುದ್ಧ ಅಸಮಾಧಾನ ಹೊಂದಿದ್ದ ಇತರ ಕೈದಿಗಳು ಒಟ್ಟಾಗಿ ಮಧ್ಯಾಹ್ನದ ವೇಳೆ ಏಕಾಏಕಿ ಹಲ್ಲೆ ನಡೆಸಿ ಕಲ್ಲಿನಿಂದ ತಲೆಯನ್ನು ಜಜ್ಜಿದ್ದರು. ಒಂದು ಕಣ್ಣಿನ ಪಾರ್ಶ್ವಭಾಗ ಸಂಪೂರ್ಣ ಹಾನಿಗೆ ಒಳಗಾಗಿ, ತಲೆಗೆ ಗಂಭೀರ ಸ್ವರೂಪದ ಪೆಟ್ಟಾಗಿ ಜಂಬಗಿ ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದ. ಹುಬ್ಬಳ್ಳಿಯ ಕಿಮ್ಸನ ಆಸ್ಪತ್ರೆಗೆ ದಾಖಲಿಸಲಾಗಿತ್ತು. 48 ದಿನಗಳ ಕಾಲ ಕೋಮಾವಸ್ಥೆಯಲ್ಲಿದ್ದ ಆರೋಪಿ ಇಹ ಲೋಕ ತ್ಯಜಿಸಿದ್ದಾನೆ.
ಜಂಬಗಿಯ ಬಳಿ ಮಾಲೆಗಾಂವ್‌ ಸ್ಫೋಟ ಸೇರಿ ಹಲವು ಕ್ರಿಮಿನಲ್‌ ಚಟುವಟಿಕೆಗಳ ಕುರಿತಂತೆ ಮಾಹಿತಿಗಳಿದ್ದು, ಇದು ಹೊರ ಬರದಂತೆ ನೋಡಿಕೊಳ್ಳುವ ಉದ್ದೇಶದಿಂದ ವ್ಯವಸ್ಥಿತವಾಗಿ ಕೊಲೆ ನಡೆಸಲಾಗಿದೆ ಎನ್ನುವ ಶಂಕೆ ವ್ಯಾಪಕವಾಗಿ ಕೇಳಿ ಬರುತ್ತಿದೇ. ಒಂದುಕಾಲದಲ್ಲಿ ಶ್ರೀರಾಮಸೇನೆಯ ನಾಯಕ ಪ್ರಮೋದ್‌ ಮುತಾಲಿಕ್‌ರ ಆಪ್ತ ಬಳಗದಲ್ಲಿ ಜಂಬಗಿ ಗುರುತಿಸಿಕೊಂಡಿದ್ದ. ಆತನ ಕೊಲೆಯತ್ನದಲ್ಲಿ ರಾಮಸೇನೆಯ ಪಾತ್ರವಿದೆ ಎಂದು ವಿವಿಧ ಸಂಘಟನೆಗಳು ಈ ಹಿಂದೆ ಆರೋಪಿಸಿದ್ದವು.ಬಾಗಲಕೋಟೆಯ ನವನಗರ ಪೊಲೀಸರು ಹಲ್ಲೆ ನಡೆಸಿದ ಬಸವರಾಜ ಡಿಗ್ಗಿ, ಹನುಮಂತಪ್ಪ ರೂಗಿಯವರ ವಿರುದ್ಧ ಈ ಮೊದಲು ದಾಖಲಿಸಿದ್ದ ಕೊಲೆಯತ್ನ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿಗಣಿಸಿ ವಿಚಾರಣೆ ಮುಂದುವರಿಸಿದ್ದಾರೆ.
ಹಿನ್ನೆಲೆ: 2008 ಮೇ.10ರಂದು ನಡೆದಿದ್ದ ಹುಬ್ಬಳ್ಳಿ-ಧಾರವಾಡ ಜಿಲ್ಲಾ ನ್ಯಾಯಾಲಯ ಸ್ಫೋಟ ಮತ್ತು ಅದೇ ವರ್ಷ ಸೆ.26ರಂದು ಧಾರವಾಡ ಬಳಿಯ ವೆಂಕಟಾಪುರ ರಾಷ್ಟ್ರೀಯ ಹೆದ್ದಾರಿ ಸ್ಫೋಟ ಯತ್ನ ಸೇರಿದಂತೆ ಹಲವಾರು ಕೊಲೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಕ್ಕಾಗಿ ನಾಗರಾಜ ಹೊಳೆ ಬಸಪ್ಪ ಜಂಬಗಿ, ಬಸವರಾಜ ಹನುಮಂತಪ್ಪ ರೂಗಿ (20), ರಮೇಶ್‌ ಬೈರೂಬಾ ಪದರ್ (24), ಬಸವರಾಜ ಯಮುನಪ್ಪ ಡಿಗ್ಗಿ (22), ಲಿಂಗರಾಜ್‌ ಗುರುನಾಥ್‌ ಜಾಲಗಾರ್ (24), ಮಂಜುನಾಥ್‌ ಅಂಬಣ್ಣ ಜಿಂಜವಾಡಗಿ (19), ದಿಪಕ್‌ ಪರುಶರಾಮ್‌ ಗೋವಿಂದಕರ್ (28)ರನ್ನು ಬಾಗಲಕೋಟೆ ಜಿಲ್ಲೆಯ ನವನಗರ ಪೊಲೀಸರು ಬಂಧಿಸಿದ್ದರು.
 2008ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನಡೆದ ಹುಬ್ಬಳ್ಳಿ-ಧಾರವಾಡ ನ್ಯಾಯಾಲಯ ಸ್ಫೋಟ ಪ್ರಕರಣದಲ್ಲಿ ಪ್ರಮುಖ ವ್ಯಕ್ತಿಗಳ ಕೈವಾಡವಿದೆ ಎಂದು ಹೇಳಲಾಗಿತ್ತು. ಬಂಧನದ ನಂತರ ಜಾಮೀನು ಕೊಡಿಸಲು ತಾವು ನಂಬಿಕೊಂಡಿರುವ ಮುಖಂಡರು ನೆರವಾಗಲಿಲ್ಲ ಎಂಬ ಅಸಮಾಧಾನದಿಂದ ಕುದಿಯುತ್ತಿದ್ದ ನಾಗರಾಜ ಜಂಬಗಿ ನ್ಯಾಯಾಲಯದ ವಿಚಾರಣೆ ವೇಳೆ ಬಾಂಬ್‌ ಸ್ಫೋಟಕ್ಕೆ ಪ್ರೇರಣೆ ನೀಡಿದ ಪ್ರಮುಖರೆಲ್ಲರ ಹೆಸರನ್ನು ಬಹಿರಂಗ ಪಡಿಸುವುದಾಗಿ ಎಚ್ಚರಿಕೆ ನೀಡಿದ್ದ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಜಂಬಗಿಯ ಸಹಚರರಿಂದಲೇ ಜೈಲಿನಲ್ಲಿ ಹಲ್ಲೆ ನಡೆಸಿ ಹತ್ಯೆ ಮಾಡುವ ಯತ್ನ ನಡೆದಿತ್ತು ಅದು ಯಶಸ್ವಿಯೂ ಆಯಿತು ಎಂದು ಮೂಲಗಳು ಶಂಕಿಸಿವೆ.
ಜಂಬಗಿಯ ಸಾವಿನೊಂದಿಗೇ ಬಾಂಬ ಸ್ಫೋಟದ ಗಂಭೀರ ಸತ್ಯಗಳು ನೆಪಥ್ಯಕ್ಕೆ ಸರಿದಂತಾಗಿದೆ ಎಂದು ಹೇಳಲಾಗಿದೆ.
ಕೃಪೆಃ ವಾರ್ತಾಭಾರತಿ.

Tuesday, September 1, 2009

ಈಗಲೂ ಕಾಡುವಾ ಅಜ್ಜಿ ಕಥೆಗಳು
ಒಂದೂರಿನಲ್ಲಿ ಒಬ್ಬ ರಾಜಕುಮಾರ ಇದ್ದನಂತೆ, ಏಳು ಸಮುದ್ರಾಚೆ ಕಾಮನಬಿಲ್ಲಿನ ಮೇಲೆ ಸ್ವರ್ಗದಂತ ರಾಜ್ಯದ ರಾಜನ ಮಗಳು ರಾಜಕುಮಾರಿ, ಏಳು ಮಲ್ಲಿಗೆ ತೂಕದ ಅಂದಗಾತಿ,
ಅಮ್ಮನ ಅಣತಿಯಂತೆ ರಾಜಕುಮಾರಿ ಕರೆ ತರಲು ರಾಜಕುಮಾರ ಬಿಸಿಲುಗುದುರೆ ಏರಿ ಹೋಗುತ್ತಾನೆ. ಅಸಹಾಯಕ ಅಜ್ಜಿಯ ಸೇವೆಯಿಂದ ಆರಂಭಿಸಿ, ರಾಜಕುಮಾರ ಮಾಡಿದ ಪುಣ್ಯದ ಕಾರ್ಯಗಳು ಸ್ವರ್ಗದ ರಾಜ್ಯ ತಲುಪಲು ನೆರವಾಗುತ್ತವೆ........

ಅಜ್ಜಿ ಕಥೆ ಹೇಳುತ್ತಿದ್ದರೆ ನಮಲ್ಲಿ ರಾಜಕುಮಾರನ ಅಹಗಾವನೆಯಾಗುತ್ತಿತ್ತು.
ಯಾವುಒದೋ ಬ್ಲಾಗ್ ಓದುತ್ತಿರುವಾಗ ಅಜ್ಜಿ ಕಥೆಯ ನೆನಪಾಯಿತು.
ಇದ್ದಕ್ಕಿದ್ದಾಗೆ ಸ್ವರ್ಣದಿನಗಳನ್ನು ಮಿಸ್ ಮಾಡಿಕೊಂಡ painful feelings.
ಎಲ್ಲಿ ಹೋದವು ಅಜ್ಜಿ ಕಥೆಗಳು, ಎಳೆವಯಸ್ಸಿನಲ್ಲೇ ಹಿರೋಯಿಸಂ ಬೆಳೆಸುತ್ತಿದ್ದ ಆ ದಿನದ ಕಥೆಗಳೆಲ್ಲಿ, ಈಗಿನ ಮಕ್ಕಳ ಬೋಜ್ಜು ಬೆಳೆಸುತ್ತಿರುವ ಡರ್ಟಿ ಟಿ.ವಿ., ಕಂಪ್ಯೂಟರ್ ಗಳೆಲ್ಲಿ.

ತಲೆಗೂದಲಲ್ಲಿ ಬೆರಳಾಡಿಸುತ್ತಾ ಅಜ್ಜಿ ಕಥೆ ಹೇಳುತ್ತಿರುವಾಗಲೇ ನಿದ್ರೆಯ ಮಡಿಲು ಸೇರುತ್ತಿದ್ದ ದಿನಗಳನ್ನು ನೆನೆಪಿಸಿಕೋಳ್ಳುತ್ತಲೇ....
ಮತ್ತೊಮ್ಮೆ ಆ ದಿನಗಳಿಗಾಗಿ ನಿರೀಕ್ಷಿಸುತ್ತಾ...................