"ಪಾಪಾ"
ನಮ್ ರಾಜ್ಯದ ಮುಖ್ಯ ಮಂತ್ರಿ ಯಡಿಯೂರಪ್ಪನವರನ್ನು ನೋಡಿದರೆ ಯಾರಿಗಾದರೂ ಹೀಗನಿಸೇ ಅನಿಸುತ್ತದೆ. ಬಂಡಾಯ ಸಾರಿದ್ದಗಣಿ ಧಣಿ ಮುಂದೆ ಮಂಡಿಯೂರಿ, ಹೈಕಮ್ಯಾಂಡ್ ಹತ್ತಿರ ಗೋಗರೆದು ಕುರ್ಚಿ ಉಳಿಸಿಕೊಂಡು ಬಂದರು ಕಾಟಾ ತಪ್ಪಿಲ್ಲ. ಕುರ್ಚಿಗಾಗಿಪಾಪಾ ತಮ್ಮನೇ ನಂಬಿದ್ದ ಶೋಭಾರನ್ನು, ಪ್ರಧಾನ ಕಾರ್ಯದರ್ಶಿ ಬಳಿಗಾರನ್ನು ಕೈ ಬಿಟ್ಟು ಕಣ್ಣೀರಿಟ್ಟರು ಕೊನೆಗೆ ಹೇಗೋ ಕುರ್ಚಿಉಳಿಯಿತು ಅನೋವಾಗ, ಮತ್ತೆ ಗಣಿ ಭೂತ ಎದುರಾಗಿದೆ.
ಒಂದೆಡೆ ಆಂಧ್ರ ಪ್ರದೇಶ ಸರಕಾರ ತನ್ನ ನೆಲೆಯಿಂದ ಬಳ್ಳಾರಿ ಜಿಲ್ಲೆಗೆ ಹೊಂದಿಕೊಂಡಿರುವ ಪ್ರದೇಶದ ಗಡಿ ಭಾಗದಗಣಿಗಾರಿಕೆಯನ್ನು ಸಿ.ಬಿ.ಐ.ಗೆ ಒಪ್ಪಿಸಿದೆ, ಇನ್ನೊಂದೆಡೆ ಸುಪ್ರೀಂ ಕೋರ್ಟ್ ಹೈಪವರ್ ಕಮಿಟಿಗೆ ವಹಿಸಿ ವರದಿ ಪಡೆದುಕೊಂಡುಕಠಿಣ ಕ್ರಮದ ಮುನ್ಸೂಚನೆ ನೀಡಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಎರಡು ರಾಜ್ಯಗಳ ಗಡಿ ಒತ್ತುವರಿ ಆಗಿರುವುದ್ದರಿಂದ ತಕ್ಷಣಗಣಿಗಾರಿಕೆ ನಿಲ್ಲಿಸಬೇಕು ಎಂದು ಅದೇಶಿದರೆ ಅನಿವಾರ್ಯವಾಗಿ ಕ್ರಮ ಕೈಗೊಳ್ಳಲೇ ಬೇಕಾಗಬಹುದು ಅಥವಾ ಸಿ.ಬಿ.ಐ. ತನಿಖೆಗೆಇಳಿದರೆ ಗೌರವಯುತ ಸರಕಾರವಾಗಿ ಅಗತ್ಯ ಸಹಕಾರ ನೀಡಲೇ ಬೇಕು. ಎರಡರಲ್ಲಿ ಯಾವುದು ನಡೆದರೂ ಗಣಿ ಉದ್ಯಮಿಗಳುನಷ್ಟ ಅನುಭವಿಸುವುದು ಖಚಿತ. ರಾಜಕೀಯವನ್ನು ಒಂದು ಉದ್ಯಮ ಅಂದುಕೊಂಡಿರುವ ಗಣಿ ದೊರೆಗಳಿಗೆ ತಮ್ಮ ಬುಡಕ್ಕೆ ನೀರುಬಂದಾಗ ರಾಜ್ಯ, ಜನ, ಯಡಿಯೂರಪ್ಪ ಯಾವುದು ಲೆಕ್ಕಕ್ಕಿರುವುದಿಲ್ಲ.
ತಮ್ಮ ಕಣ್ಣು ಹೋದರು ಚಿಂತೆ ಇಲ್ಲ ಎದುರಾಳಿಯ ಎರಡು ಕಣ್ಣು ತೆಗೆಯಬೇಕು ಎಂಬ ಹಠವಾದಿ ಜನಾರ್ದನ ರೆಡ್ಡಿ ಈಗಾಗಲೇಯಡಿಯೂರಪ್ಪನವರಿಗೆ ತಮ್ಮ ಹಠದ ಪರಿಚಯ ಮಾಡಿಸಿದ್ದಾರೆ. ಕಂತೆಗೆ ತಕ್ಕ ಬೊಂತೆ ಎಂಬಂತೆ ರೇಣುಕ ಎಂಬ ನರ್ಸೋಬಳಗೆಣೆಯ, ಬೇಳೂರು ಗೋಪಾಲ ಕೃಷ್ಣ ಎಂಬವರು ತಮ್ಮದೊಂದು ಪಡೆ ಕಟ್ಟಿಕೊಂಡು ಯಡಿಯೂರಪ್ಪನವರ ಬುಡಕ್ಕೆ ಕೆಂಡಹಾಕುತ್ತಿದ್ದಾರೆ. ದುರಂತವೆಂದರೆ ಇದೆ ರೇಣುಕನನ್ನು, ಯಡಿಯೂರಪ್ಪನವರೇ ಬೆಳೆಸಿದು. ಮಾನಸ ಪುತ್ರ ರೇಣುಕ ಹದ್ದಾಗಿದ್ದಾನೆ.
ಸಿ.ಬಿ.ಐ. ತನಿಖೆ-ಸುಪ್ರೀಂ ಕೋರ್ಟ್ ಆದೇಶ ಪಾಲನೆ ಯಾವುದಕ್ಕೆ ಕೈ ಇಟ್ಟರು ಯಡಿಯೂರಪ್ಪ ಮಾಜಿಯಾಗುವುದು ಗ್ಯಾರಂಟಿ.
"ಮಾಡಿದ ಪಾಪಾ ಬೆನ್ನಿಗೆ ಬಿದ್ದಾಗ ತಿನ್ನುವ ಬದನೆ ಕಾಯಿ ದೆವ್ವ ಆಗುತ್ತಂತೆ" ಒಂದು ಕಾಲದಲ್ಲಿ ಹಣವಿದ್ದ ಗಣಿಧಣಿಗಳಿಗೆ ಮಣೆಹಾಕಿದಕ್ಕೆ ಯಡಿಯೂರಪ್ಪ ಪ್ರಾಯಾಶ್ಚಿತ ಪಡಲೇ ಬೇಕು.
ಹಿಂದೆ ರಾಮಕೃಷ್ಣ ಹೆಗಡೆ, ದೇವರಾಜ ಅರಸು ತಾವು ಮುಖ್ಯಮಂತ್ರಿಯಾಗಲು ಹಣವಂತರ ನೆರವು ಪಡೆದುಕೊಂಡಿದರು. ಆದರೆ, ಹಣ ಮತ್ತು ಅಧಿಕಾರ ಒಂದೆಡೆ ಕೆಂದ್ರಿಕೃತವಾಗಬರದು ಎಂಬ ತತ್ವ ಪಾಲಿಸಿಕೊಂಡು ಬಂದಿದ್ದರು.
ಯಡಿಯೂರಪ್ಪನವರಿಗೆ ಯಾರು ಸಲಹೆ ಕೊಟ್ಟರೋ ಗೊತ್ತಿಲ್ಲ. ದಡ್ದರಂತೆ ಗಣಿಧಣಿಗಳನ್ನು ಹತ್ತಿರಕ್ಕೆ ತಂದುಕೊಂಡು ಈಗಕ್ಯಾಮರಗಳೆದುರು ಜೋಕರ್ ರೀತಿ ನಗುತ್ತಾರೆ. ಅ ನಗು ನೋಡಿದರೆ ಪಾಪಾ ಅನಿಸುತ್ತದೆ.
ರಾಜ್ಯದ ಮುಖ್ಯಮಂತ್ರಿಗೆ ಈ ಸ್ಥಿತಿ ಬರಬಾರದಿತ್ತು.
ಏನಾದರು ಹಾಳಾಗಲಿ ಪ್ರಜಾಪ್ರಭುತ್ವದಂತೆ ಐದು ವರ್ಷ ಸರಕಾರ ಉಳಿದರೆ ಸಾಕು ಎಂದು ಜನ ನಿಟ್ಟುಸಿರು ಬಿಡುತ್ತಿದ್ದಾರೆ.
ಯಡಿಯೂರಪ್ಪ ಗಣಿ ಸಂಪತ್ತು ಅಡವು ಮಾಡಿಯಾದರೂ ಜನರ ಆಸೆಯಂತೆ ಸರಕಾರ ಉಳಿಸಿ ಕೊಳ್ಳುತಾರೋ ಅಥವಾ ರಾಜಕೀಯತಂತ್ರಗಾರಿಕೆ ಮೆರೆದು ತೆರೆ ಮರೆಯಲ್ಲಿ ಗಣಿಧಣಿಗಳನ್ನು ಮಟ್ಟ ಹಾಕುತ್ತಾರೋ ಎಂಬುದೇ ಕದನ ಕುತೂಹಲ
ಎಲ್ಲದಕ್ಕೂ ಕಾಲನೆ ಉತ್ತರ ಹೇಳಬೇಕು ............ !
ಬೆಂಕಿಯಂತ್ತಿದ್ದ ಯಡಿಯೂರಪ್ಪನವರಿಗೆ ಎಂತ ಸ್ಥಿತಿ .........!
No comments:
Post a Comment