Sunday, November 22, 2009

ಬಿತ್ತಿಯೂ ಬೆಳೆ ಕಾಣದೆ ಅಳುವವರ
ಕಣ್ಣೀರು ಒರೆಸಬಾರದೇ....

ಪೆನ್ನಿನ ಧ್ವನಿ ಪ್ರಾಣವೆನಗೆ

ಪ್ರಜೆಗೆ ನಾನು ಅರ್ಪಿತ,

ಹೋರಾಟವೇ ಡೈರಕ್ಷನ್

ಹಾಡು ನನಗೆ ಆಕ್ಸಿಜನ್
ಎಂಬ ಕವಿವಾಣಿ ನಿತ್ಯ ನೂತನ.

ಪತ್ರಿಕೆಗೆ ಲೇಖನಿಯೇ ಜೀವಾಳ. ಲೇಖನಿಯನ್ನು ಉಳ್ಳವರು ತಮಗೆ ಬೇಕಾದರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಆರಂಭದಿಂದಲೂ ಪತ್ರಿ
ಕಾರಂಗ ನಿಜವಾಗಿಯೂ "ಜನತೆ" ಪರವಾಗಿತ್ತು ಅವರಬೇಕು-ಬೇಡಗಳನ್ನು ಪ್ರತಿಫಲಿಸುತ್ತಿದ್ದವು. ಆದರೆ, ಇಂದು ಪತ್ರಿಕಾರಂಗ ತನ್ನ ಮೂಲನೆಲೆಯಿಂದ ದಿಕ್ಕು ಬದಲಿಸಿ, ಮಗ್ಗಲು ತಿರುಗಿಸಿದೆ. ಈಗ ಅದು ಉದ್ಯಮವಾಗಿದೆ. ಇಲ್ಲಿಯೂ ಹಿಡಿ ಧಾನ್ಯವ ಬಿತ್ತಿ ಖಂಡುಗ ಬೆಳೆಯಬೇಕೆಂಬ ಹೆಬ್ಬಯಕೆ ಮನೆಮಾಡಿದೆ. ಪ್ರಕೃತಿ ಸಹಜ ಬಯಕೆಗಳನ್ನು ತೀರಿಸಬಹುದು, ಆದರೆ, ಅಂಗ-ಅಂಗಗಳಿಗೆಲ್ಲ ಹೊತ್ತಿಕೊಂಡ ಇಂಗದ ದಾಹ ತೀರುವುದೆಂತೂ?
ಲೇಖನಿಯನ್ನು ಕುಳವಾಗಿಯೂ, ಖಡ್ಗವಾಗಿಯೂ ಮಾತ್ರವಲ್ಲ, ಚಿಕಿತ್ಸೆ ಮಾಡುವಶಸ್ತ್ರ- ಅಸ್ತ್ರವಾಗಿಯೂ ಬಳಕೆ ಮಾಡಬಹುದು. ನಾವು ಯಾವುದನ್ನು ಎಷ್ಟುಪ್ರಮಾಣದಲ್ಲಿ ಯಾರಿಗೆ, ಹೇಗೆ ಮತ್ತು ಯಾವ ಕಾರಣಗಳಿಗೆ ಬಳಕೆಮಾಡುತ್ತೇವೆಂಬುದು ಬಹಳ ಮುಖ್ಯ. ಗ್ರಾಮ್ಯಾ ಸೊಗಡಿನ ಚಿತ್ರದುರ್ಗ ಜಿಲ್ಲೆಯಲ್ಲಿಪತ್ರಿಕೆಯೊಂದನ್ನು ಇವತ್ತಿನ ಸಂದರ್ಭದಲ್ಲಿ ತರಬೇಕೆಂದು ಹಂಬಲಿಸುವುದುಕನಸಿರುವವರಿಗೆ ಮಾತ್ರ ಸಾಧ್ಯ ಎಂಬುದು ನನ್ನ ಅಚಲ ನಂಬಿಕೆ. ಕನಸಿದ್ದ ಮಾತ್ರಕ್ಕೆ ಅದು ವಾಸ್ತವಕ್ಕೆ ಇಳಿಯುವುದು ಸಾಧ್ಯವೆಂಬಪ್ರಶ್ನೆ ಏಳುತ್ತದೆ.
ಅದೇನೆ ಇದ್ದರೂ, ಪತ್ರಿಕೆ, ಪತ್ರಿಕಾರಂಗ ಮತ್ತು ಪತ್ರಿಕೋದ್ಯಮದ ಗಂಧದ ಸೆಳೆತಕ್ಕೆ ಸಿಕ್ಕು ಹಿಡಿಮುಷ್ಠಿಯೊಳಗೆ ಪ್ರಪಂಚವನ್ನೆಹಿಡಿದುಕೊಳ್ಳವ ಹುಂಬ ಪ್ರಯತ್ನವೇಕಾಗಬಾದೇಕೆ? ಆದರೂ, ಪ್ರಯತ್ನಕ್ಕೆ ಯಶಸ್ಸು ಇದೆ. ಅದು ನಮ್ಮ ನಡಿಗೆಯ ಮೇಲೆ ನಿಂತಫಲ.
ಇಂದು ಪತ್ರಿಕೋದ್ಯಮ ಅತ್ಯಂತ ವಿಸ್ತಾರವಾಗಿ ಆವರಿಸಿಕೊಂಡಿದೆ. ಏಷ್ಟೇ ಆಳ-ಅಗಲಕ್ಕೆ ಆವರಿಸಿಕೊಂಡಿದ್ದರೂ, ಅದು ಪ್ರಸ್ತುತಕೇವಲ ಶೇ.5ರಷ್ಟು ಜನತೆಯ ಭಾವನೆ-ಮತ್ತವರ ತುಮುಲ, ಬೇಕು-ಬೇಡಗಳನ್ನು ಮಾತ್ರ ಪ್ರಚುರ ಪಡಿಸುತ್ತದೆ.
ನಮ್ಮ ಬಡ ಭಾರತದಲ್ಲಿ ಇಂದಿಗೂ ಎಲೆಮರೆಯ ಕಾಯಿಯಂತೆ ತಮ್ಮ ಜೀವನವನ್ನೇ ಗಂಧದಂತೆ ತೇಯುತ್ತಿರುವ ಹಳ್ಳಿಗಾಡಿನಶೇ.70ರಷ್ಟು ಜನಸಾಮಾನ್ಯ ಬದುಕು-ಭವಣೆಗಳನ್ನು ಪ್ರತಿಕೋದ್ಯಮ ಪರಿಗಣಿಸಲೇ ಇಲ್ಲ. ಸ್ವಾತಂತ್ರ ಬಂದು ಆರು ದಶಕಗಳೇಕಳೆದರೂ ಇಂದಿಗೂ ನಮ್ಮ ಹಳ್ಳಿಗಾಡಿನ ಜನ ಹಸಿವಿಂದ ಸಾಯುತ್ತಿದ್ದಾರೆ. ಗ್ರಾಮ್ಯಾ ಭಾರತದ ಬಹುದೊಡ್ಡ ರೈತ ಸಮೂಹ ದೇಶದಬೆನ್ನೆಲುಬಾಗಿರುವ ರೈತರು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಸಾಲು-ಸಾಲಾಗಿ ಶರಣಾಗುತ್ತಿದ್ದಾರೆ.
ಸರಕಾರದ ಮಾಹಿತಿಯಂತೆ 1997ರಿಂದ 2005 ವರೆಗೆ ನಮ್ಮ ದೇಶದಲ್ಲಿ 1.50 ಲಕ್ಷಕ್ಕೂ ಅಧಿಕ ಮಂದಿ ರೈತರು ಸಾವಿಗೆಶರಣಾಗಿದ್ದಾರೆ. ಇದು ನಮ್ಮ ಮಾಧ್ಯಮಗಳಿಗೆ ಸುದ್ಧಿಯಾಗಲಿಲ್ಲ. ಹಳ್ಳಿಗಾಡಿನ ಸಮೂಹ ಕೇವಲ 5 ವರ್ಷಗಳಿಗೂಮ್ಮೆ ಬರುವಚುನಾವಣೆಗಳಲ್ಲಿ ಮಾತ್ರ ಬೆದರು ಬೊಂಬೆಗಳಂತೆ ಇರಬೇಕು ಅಷ್ಟೇ. ಉಳಿದಂತೆ ಅವರು ನಿರ್ಜಿವ.
ಇಂತಹ ದೌರ್ಭಗ್ಯ ದಮನಿತ ಬಡ-ರೈತ, ಕೃಷಿ ಕೂಲಿ ಕಾರ್ಮಿಕರ ಒಳಕುದಿತಕ್ಕೆ ಪತ್ರಿಕೆ, ಮಾಧ್ಯಮ, ಲೇಖಗಳ ಧ್ವನಿಯಾಗುವುದುಅವುಗಳ ಜವಾಬ್ದಾರಿಯಾಗಿತ್ತು. ಆದರೆ, ಹಳ್ಳಿಗಾಡಿನ ಸಮೂಹವಿಂದು ಮಾಧ್ಯಮಗಳಲ್ಲಿ ಕೇವಲ ನಿಧನ ವಾರ್ತೆ ಮತ್ತು ಅದರಮಗ್ಗುಲಲ್ಲೆ ಬರುವ ಶ್ರದ್ಧಾಂಜಲಿಗೆ ಸೀಮಿತಗೊಂಡಿವೆ. ಪತ್ರಿಕೆ ಯಾರಿಗೆ-ಏನ್ನನ್ನು ತಲುಪಿಸಬೇಕು ಎಂಬ ದಿಕ್ಸೂಚಿ ಅಗತ್ಯ.

ರಾಜ್ಯದ ಉತ್ತರ ಕರ್ನಾಟಕದ 15 ಜಿಲ್ಲೆಗಳ 200ಕ್ಕೂ ಹೆಚ್ಚು ಮಂದಿ ನೆರೆ ಹಾವಳಿಯಿಂದ ಅಸುನಿಗಿದ್ದಾರೆ. 4ಲಕ್ಷಕ್ಕೂ ಅಧಿಕ ಮಂದಿಮನೆ-ಮಠ ಕಳೆದುಕೊಂಡು ಬೀದಿಯಲ್ಲಿ ನಿಂತಿದ್ದಾರೆ. ಸಾವಿರಾರು ಹಳ್ಳಿಗಳು-ಲಕ್ಷಾಂತರ ಎಕರೆಯಲ್ಲಿದ್ದ ಬೆಳೆ ಸಂಪೂರ್ಣನಾಶವಾಗಿದೆ. ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದ್ದ ಸರಕಾರ ನನ್ನಿಂದ ಏನು ಸಾಧ್ಯವಿಲ್ಲ ಎಂದು ಭೀಕ್ಷೆಗೆ ನಿಲ್ಲುತ್ತದೆ. ನೆರೆಯವೇಗದಲ್ಲೆ ಸರಕಾರ ಭಿನ್ನಮತದ ಬಿಕ್ಕಟ್ಟಿಂದ ಆತಂಕಕ್ಕೆ ಸಿಲುಕತ್ತದೆ. ಆದರೆ, ನಮ್ಮ ಮಾಧ್ಯಮಗಳು ನೆರೆಯ ಸಂತ್ರಸ್ತರನ್ನು ಬಿಟ್ಟುಮುಖ್ಯಮಂತ್ರಿ, ಸಚಿವರು, ಶಾಸಕರುಗಳ ಮನೆಯ ಕಾವಲು ನಾಯಿಗಳಾಗಿ ನಿಲ್ಲುತ್ತವೆ. ಅವರ ಮನೆಗಳಿಗೆ ಬರುವ ಹಲ್ಲಿ, ಹಾವು, ಬೆಕ್ಕುಗಳು ಮತ್ತು ಅವು ಬಂದ ರಾಶಿ-ನಕ್ಷತ್ರ, ಶಕುನಗಳ ಪರಾಮರ್ಶೆಗೆ ನಿಲ್ಲುತ್ತವೆ. ಅದು ಅತ್ಯಂತ ಮಹತ್ವದ ಸುದ್ಧಿಯಾಗುತ್ತವೆ. ಇದು ನಮ್ಮ ಆಧ್ಯತೆಯಾಗಬೇಕೇ?
ಮುಖ್ಯವಾಹಿಯಲ್ಲಿಂದು ಹೂವಿನಷ್ಟೇ ಪರಿಮಳ ಮತ್ತು ಅಷ್ಟೇ ಆಯಸ್ಸಿನ ಹಲವಾರು ಪತ್ರಿಕೆಗಳು ಬಂದು-ಹೋಗುತ್ತಿವೆ. ಇಂತಹವುಗಳ ಸಾಲಿಗೆ ನಾವು ಸೇರುವುದು ಕಷ್ಟದ ಕೆಲಸವಲ್ಲ. ಇವೆಲ್ಲಕ್ಕಿಂತ ನಾವು ಭಿನ್ನ ಎಂಬುದಾದರೆ ನಮ್ಮ ಆಧ್ಯತೆ ಏನುಎಂಬ ಪ್ರಶ್ನೆ ಹಾಕಿಕೊಳ್ಳಬೇಕು. ದಾರಿಯಲ್ಲಿ ಕಣ್ಣು ಬಿಡಬೇಕು. ಆರಳಿಸಿ ನಿಂತು ಮುಂದೆ ಸಾಗಬೇಕು.
ದಿ ಹಿಂದೂಪತ್ರಿಕೆಯ ಕೃಷಿ ವಿಭಗದ ಮುಖ್ಯ ಅಂಕಣಕಾರ ಪಿ.ಸಾಯಿನಾಥ್ ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕಲಿತರೂ, ಹಳ್ಳಿಗಾಡಿನ ಗ್ರಾಮ್ಯಾ ಸೊಗಡಿನ ಸಗಣಿ-ಗಂಜಳ ಮಧ್ಯೆದ ಬದುಕಿನ ಪರಿಮಳ ಗ್ರಹಿಸಿದವರು.
ರೈತರ ಆತ್ಮಹತ್ಯೆ ಹಿಂದಿನ ನಗ್ನ ಸತ್ಯಗಳನ್ನು ದಂತ ಗೋಪುರದೊಳಗಿದ್ದ ಮಾಧ್ಯಮಗಳಿಗೆ ಬಿಚ್ಚಿಟ್ಟ ದೀಮಂತ ವ್ಯಕ್ತಿ. ಅವರ ಲೇಖನನೀವು ಬಿತ್ತಿದ್ದೀರಿ, ಅದಕ್ಕೀಗ ಅಳುತ್ತೀರಿ ಎಂಬ ಶೀರ್ಷಿಕೆ ಇದೇ ಸಂದರ್ಭದಲ್ಲಿ ನೆನಪಾಗುತ್ತದೆ. ಬಿತ್ತಿಯೂ ಬೆಳೆಕಾಣದೆ ಅಳುವವರಕಣ್ಣೀರು ಒರೆಸಲು ನಾವು ಮುಂದಾಗಬೇಡವೇ? ಅವರು ನಮ್ಮ ಆದ್ಯತೆ ಏಕಾಗಬಾರದು...

ರಾಮಜೋಗಿಹಳ್ಳಿ ಪ್ರಕಾಶ

ನನ್ನ ಸಹೋದ್ಯೋಗಿ ಮಿತ್ರ ರಾಮಜೋಗಿಹಳ್ಳಿ ಪ್ರಕಾಶ್
ರೈತರ ಬಗ್ಗೆ ತಮ್ಮ ಹೊಟ್ಟೆಯಲ್ಲಿದ್ದ ಕಾಳಜಿಯನ್ನು
ಕೀ ಬೋರ್ಡ್ ಮೂಲಕ ಕಂಪ್ಯೂಟರ್ ಗೆ ತುರುಕಿದ್ದಾರೆ.

ಅದರ ಯತಾವತ್ತು ರೂಪ ಮೇಲಿದೆ.
ಉಮೇಶ್ ಕೋಲಿಗೆರೆ

No comments: