48 ದಿನಗಳ ಕೋಮಾದ ನಂತರ
ಇಹಲೋಕ ತೊರೆದ ನಾಗರಾ ಜಂಬಗಿ
ಜೈಲಿನ ಸಹ ಕೈದಿಗಳಿಂದಲೇ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಹುಬ್ಬಳ್ಳಿ- ಧಾರವಾಡ ನ್ಯಾಯಾಲಯದ ಸ್ಫೋಟದ ಪ್ರಮುಖ ಆರೋಪಿ ನಾಗರಾಜ ಜಂಬಗಿ ಬುಧವಾರ ಮಧ್ಯಾಹ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತಪಟ್ಟಿದ್ದಾನೆ ಎನ್ನುವುದಕ್ಕಿಂತ ಕೊಲ್ಲಲ್ಪಟ್ಟಿದ್ದಾನೆ ಎನ್ನುವುದು ಸೂಕ್ತವೆನೋ.
ಬಾಂಬ್ ಸ್ಫೋಟ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಿಗಾಗಿ ಬಾಗಲಕೋಟೆಯ ಜಿಲ್ಲೆಯ ಕಾರಾಗೃಹದಲ್ಲಿ ವಿಚಾರಣಾ ಖೈದಿಯಾಗಿದ್ದ ನಾಗರಾಜ ಜಂಬಗಿಯ ಮೇಲೆ ಜುಲೈ 18ರಂದು ಆತನ ಸಹ ಕೈದಿಗಳಾದ ಬಸವರಾಜ ಯಮುನಪ್ಪ ಡಿಗ್ಗಿ ಮತ್ತು ಬಿ.ಹನುಮಂತಪ್ಪ ರೂಗಿ ಎಂಬವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಗಂಭೀರ ಸ್ವರೂಪದ ಗಾಯಗಳಾಗಿದ್ದ ಜಂಬಗಿ ಅಂದಿನಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೋಮಾ ಅವಸ್ಥೆಯಲ್ಲಿಯೇ ಇದ್ದನು. ಇತ್ತೀಚೆಗೆ ಚಿಕಿತ್ಸೆಗೆ ಸ್ಪಂದಿಸತೊಡಗಿದ್ದ ಜಂಬಗಿಯ ದೇಹ 2009ರ ಸೆಪ್ಟಂಬರ್ 2ರಂದು ಬೆಳಗ್ಗೆ ಅನಿರೀಕ್ಷಿತವಾಗಿ ನಿಶ್ಚೇತನಗೊಂಡು ಮಧ್ಯಾಹ್ನದ ವೇಳೆಗೆ ವೈದ್ಯರ ಪ್ರಯತ್ನ ಫಲ ನೀಡದೆ ಆತ ಸಾವನಪ್ಪಿದ್ದಾನೆ.
"ಹಲವಾರು ಅಪರಾಧ ಕೃತ್ಯಗಳಲ್ಲಿ ಜಂಬಗಿಯೊಂದಿಗೆ ಕೈಜೋಡಿಸಿದ್ದ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಿಸಲು ಹಣ ನೀಡಲಿಲ್ಲ" ಎಂಬ ಕಾರಣಕ್ಕೆ ಹನುಮಂತಪ್ಪ ರೂಗಿ ಜಗಳ ತೆಗೆದಿದ್ದ. ಇದಕ್ಕೆ ಪ್ರತಿಯಾಗಿ ಜಂಬಗಿಯೂ ಧಮಕಿ ಹಾಕಿದ್ದ. ಜಂಬಗಿಯ ವಿರುದ್ಧ ಅಸಮಾಧಾನ ಹೊಂದಿದ್ದ ಇತರ ಕೈದಿಗಳು ಒಟ್ಟಾಗಿ ಮಧ್ಯಾಹ್ನದ ವೇಳೆ ಏಕಾಏಕಿ ಹಲ್ಲೆ ನಡೆಸಿ ಕಲ್ಲಿನಿಂದ ತಲೆಯನ್ನು ಜಜ್ಜಿದ್ದರು. ಒಂದು ಕಣ್ಣಿನ ಪಾರ್ಶ್ವಭಾಗ ಸಂಪೂರ್ಣ ಹಾನಿಗೆ ಒಳಗಾಗಿ, ತಲೆಗೆ ಗಂಭೀರ ಸ್ವರೂಪದ ಪೆಟ್ಟಾಗಿ ಜಂಬಗಿ ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದ. ಹುಬ್ಬಳ್ಳಿಯ ಕಿಮ್ಸನ ಆಸ್ಪತ್ರೆಗೆ ದಾಖಲಿಸಲಾಗಿತ್ತು. 48 ದಿನಗಳ ಕಾಲ ಕೋಮಾವಸ್ಥೆಯಲ್ಲಿದ್ದ ಆರೋಪಿ ಇಹ ಲೋಕ ತ್ಯಜಿಸಿದ್ದಾನೆ.
ಜಂಬಗಿಯ ಬಳಿ ಮಾಲೆಗಾಂವ್ ಸ್ಫೋಟ ಸೇರಿ ಹಲವು ಕ್ರಿಮಿನಲ್ ಚಟುವಟಿಕೆಗಳ ಕುರಿತಂತೆ ಮಾಹಿತಿಗಳಿದ್ದು, ಇದು ಹೊರ ಬರದಂತೆ ನೋಡಿಕೊಳ್ಳುವ ಉದ್ದೇಶದಿಂದ ವ್ಯವಸ್ಥಿತವಾಗಿ ಕೊಲೆ ನಡೆಸಲಾಗಿದೆ ಎನ್ನುವ ಶಂಕೆ ವ್ಯಾಪಕವಾಗಿ ಕೇಳಿ ಬರುತ್ತಿದೇ. ಒಂದುಕಾಲದಲ್ಲಿ ಶ್ರೀರಾಮಸೇನೆಯ ನಾಯಕ ಪ್ರಮೋದ್ ಮುತಾಲಿಕ್‌ರ ಆಪ್ತ ಬಳಗದಲ್ಲಿ ಜಂಬಗಿ ಗುರುತಿಸಿಕೊಂಡಿದ್ದ. ಆತನ ಕೊಲೆಯತ್ನದಲ್ಲಿ ರಾಮಸೇನೆಯ ಪಾತ್ರವಿದೆ ಎಂದು ವಿವಿಧ ಸಂಘಟನೆಗಳು ಈ ಹಿಂದೆ ಆರೋಪಿಸಿದ್ದವು.ಬಾಗಲಕೋಟೆಯ ನವನಗರ ಪೊಲೀಸರು ಹಲ್ಲೆ ನಡೆಸಿದ ಬಸವರಾಜ ಡಿಗ್ಗಿ, ಹನುಮಂತಪ್ಪ ರೂಗಿಯವರ ವಿರುದ್ಧ ಈ ಮೊದಲು ದಾಖಲಿಸಿದ್ದ ಕೊಲೆಯತ್ನ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿಗಣಿಸಿ ವಿಚಾರಣೆ ಮುಂದುವರಿಸಿದ್ದಾರೆ.
ಹಿನ್ನೆಲೆ: 2008 ಮೇ.10ರಂದು ನಡೆದಿದ್ದ ಹುಬ್ಬಳ್ಳಿ-ಧಾರವಾಡ ಜಿಲ್ಲಾ ನ್ಯಾಯಾಲಯ ಸ್ಫೋಟ ಮತ್ತು ಅದೇ ವರ್ಷ ಸೆ.26ರಂದು ಧಾರವಾಡ ಬಳಿಯ ವೆಂಕಟಾಪುರ ರಾಷ್ಟ್ರೀಯ ಹೆದ್ದಾರಿ ಸ್ಫೋಟ ಯತ್ನ ಸೇರಿದಂತೆ ಹಲವಾರು ಕೊಲೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಕ್ಕಾಗಿ ನಾಗರಾಜ ಹೊಳೆ ಬಸಪ್ಪ ಜಂಬಗಿ, ಬಸವರಾಜ ಹನುಮಂತಪ್ಪ ರೂಗಿ (20), ರಮೇಶ್ ಬೈರೂಬಾ ಪದರ್ (24), ಬಸವರಾಜ ಯಮುನಪ್ಪ ಡಿಗ್ಗಿ (22), ಲಿಂಗರಾಜ್ ಗುರುನಾಥ್ ಜಾಲಗಾರ್ (24), ಮಂಜುನಾಥ್ ಅಂಬಣ್ಣ ಜಿಂಜವಾಡಗಿ (19), ದಿಪಕ್ ಪರುಶರಾಮ್ ಗೋವಿಂದಕರ್ (28)ರನ್ನು ಬಾಗಲಕೋಟೆ ಜಿಲ್ಲೆಯ ನವನಗರ ಪೊಲೀಸರು ಬಂಧಿಸಿದ್ದರು.
2008ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನಡೆದ ಹುಬ್ಬಳ್ಳಿ-ಧಾರವಾಡ ನ್ಯಾಯಾಲಯ ಸ್ಫೋಟ ಪ್ರಕರಣದಲ್ಲಿ ಪ್ರಮುಖ ವ್ಯಕ್ತಿಗಳ ಕೈವಾಡವಿದೆ ಎಂದು ಹೇಳಲಾಗಿತ್ತು. ಬಂಧನದ ನಂತರ ಜಾಮೀನು ಕೊಡಿಸಲು ತಾವು ನಂಬಿಕೊಂಡಿರುವ ಮುಖಂಡರು ನೆರವಾಗಲಿಲ್ಲ ಎಂಬ ಅಸಮಾಧಾನದಿಂದ ಕುದಿಯುತ್ತಿದ್ದ ನಾಗರಾಜ ಜಂಬಗಿ ನ್ಯಾಯಾಲಯದ ವಿಚಾರಣೆ ವೇಳೆ ಬಾಂಬ್ ಸ್ಫೋಟಕ್ಕೆ ಪ್ರೇರಣೆ ನೀಡಿದ ಪ್ರಮುಖರೆಲ್ಲರ ಹೆಸರನ್ನು ಬಹಿರಂಗ ಪಡಿಸುವುದಾಗಿ ಎಚ್ಚರಿಕೆ ನೀಡಿದ್ದ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಜಂಬಗಿಯ ಸಹಚರರಿಂದಲೇ ಜೈಲಿನಲ್ಲಿ ಹಲ್ಲೆ ನಡೆಸಿ ಹತ್ಯೆ ಮಾಡುವ ಯತ್ನ ನಡೆದಿತ್ತು ಅದು ಯಶಸ್ವಿಯೂ ಆಯಿತು ಎಂದು ಮೂಲಗಳು ಶಂಕಿಸಿವೆ.
ಜಂಬಗಿಯ ಸಾವಿನೊಂದಿಗೇ ಬಾಂಬ ಸ್ಫೋಟದ ಗಂಭೀರ ಸತ್ಯಗಳು ನೆಪಥ್ಯಕ್ಕೆ ಸರಿದಂತಾಗಿದೆ ಎಂದು ಹೇಳಲಾಗಿದೆ.
ಕೃಪೆಃ ವಾರ್ತಾಭಾರತಿ.
"ಹಲವಾರು ಅಪರಾಧ ಕೃತ್ಯಗಳಲ್ಲಿ ಜಂಬಗಿಯೊಂದಿಗೆ ಕೈಜೋಡಿಸಿದ್ದ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಿಸಲು ಹಣ ನೀಡಲಿಲ್ಲ" ಎಂಬ ಕಾರಣಕ್ಕೆ ಹನುಮಂತಪ್ಪ ರೂಗಿ ಜಗಳ ತೆಗೆದಿದ್ದ. ಇದಕ್ಕೆ ಪ್ರತಿಯಾಗಿ ಜಂಬಗಿಯೂ ಧಮಕಿ ಹಾಕಿದ್ದ. ಜಂಬಗಿಯ ವಿರುದ್ಧ ಅಸಮಾಧಾನ ಹೊಂದಿದ್ದ ಇತರ ಕೈದಿಗಳು ಒಟ್ಟಾಗಿ ಮಧ್ಯಾಹ್ನದ ವೇಳೆ ಏಕಾಏಕಿ ಹಲ್ಲೆ ನಡೆಸಿ ಕಲ್ಲಿನಿಂದ ತಲೆಯನ್ನು ಜಜ್ಜಿದ್ದರು. ಒಂದು ಕಣ್ಣಿನ ಪಾರ್ಶ್ವಭಾಗ ಸಂಪೂರ್ಣ ಹಾನಿಗೆ ಒಳಗಾಗಿ, ತಲೆಗೆ ಗಂಭೀರ ಸ್ವರೂಪದ ಪೆಟ್ಟಾಗಿ ಜಂಬಗಿ ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದ. ಹುಬ್ಬಳ್ಳಿಯ ಕಿಮ್ಸನ ಆಸ್ಪತ್ರೆಗೆ ದಾಖಲಿಸಲಾಗಿತ್ತು. 48 ದಿನಗಳ ಕಾಲ ಕೋಮಾವಸ್ಥೆಯಲ್ಲಿದ್ದ ಆರೋಪಿ ಇಹ ಲೋಕ ತ್ಯಜಿಸಿದ್ದಾನೆ.
ಜಂಬಗಿಯ ಬಳಿ ಮಾಲೆಗಾಂವ್ ಸ್ಫೋಟ ಸೇರಿ ಹಲವು ಕ್ರಿಮಿನಲ್ ಚಟುವಟಿಕೆಗಳ ಕುರಿತಂತೆ ಮಾಹಿತಿಗಳಿದ್ದು, ಇದು ಹೊರ ಬರದಂತೆ ನೋಡಿಕೊಳ್ಳುವ ಉದ್ದೇಶದಿಂದ ವ್ಯವಸ್ಥಿತವಾಗಿ ಕೊಲೆ ನಡೆಸಲಾಗಿದೆ ಎನ್ನುವ ಶಂಕೆ ವ್ಯಾಪಕವಾಗಿ ಕೇಳಿ ಬರುತ್ತಿದೇ. ಒಂದುಕಾಲದಲ್ಲಿ ಶ್ರೀರಾಮಸೇನೆಯ ನಾಯಕ ಪ್ರಮೋದ್ ಮುತಾಲಿಕ್‌ರ ಆಪ್ತ ಬಳಗದಲ್ಲಿ ಜಂಬಗಿ ಗುರುತಿಸಿಕೊಂಡಿದ್ದ. ಆತನ ಕೊಲೆಯತ್ನದಲ್ಲಿ ರಾಮಸೇನೆಯ ಪಾತ್ರವಿದೆ ಎಂದು ವಿವಿಧ ಸಂಘಟನೆಗಳು ಈ ಹಿಂದೆ ಆರೋಪಿಸಿದ್ದವು.ಬಾಗಲಕೋಟೆಯ ನವನಗರ ಪೊಲೀಸರು ಹಲ್ಲೆ ನಡೆಸಿದ ಬಸವರಾಜ ಡಿಗ್ಗಿ, ಹನುಮಂತಪ್ಪ ರೂಗಿಯವರ ವಿರುದ್ಧ ಈ ಮೊದಲು ದಾಖಲಿಸಿದ್ದ ಕೊಲೆಯತ್ನ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿಗಣಿಸಿ ವಿಚಾರಣೆ ಮುಂದುವರಿಸಿದ್ದಾರೆ.ಹಿನ್ನೆಲೆ: 2008 ಮೇ.10ರಂದು ನಡೆದಿದ್ದ ಹುಬ್ಬಳ್ಳಿ-ಧಾರವಾಡ ಜಿಲ್ಲಾ ನ್ಯಾಯಾಲಯ ಸ್ಫೋಟ ಮತ್ತು ಅದೇ ವರ್ಷ ಸೆ.26ರಂದು ಧಾರವಾಡ ಬಳಿಯ ವೆಂಕಟಾಪುರ ರಾಷ್ಟ್ರೀಯ ಹೆದ್ದಾರಿ ಸ್ಫೋಟ ಯತ್ನ ಸೇರಿದಂತೆ ಹಲವಾರು ಕೊಲೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಕ್ಕಾಗಿ ನಾಗರಾಜ ಹೊಳೆ ಬಸಪ್ಪ ಜಂಬಗಿ, ಬಸವರಾಜ ಹನುಮಂತಪ್ಪ ರೂಗಿ (20), ರಮೇಶ್ ಬೈರೂಬಾ ಪದರ್ (24), ಬಸವರಾಜ ಯಮುನಪ್ಪ ಡಿಗ್ಗಿ (22), ಲಿಂಗರಾಜ್ ಗುರುನಾಥ್ ಜಾಲಗಾರ್ (24), ಮಂಜುನಾಥ್ ಅಂಬಣ್ಣ ಜಿಂಜವಾಡಗಿ (19), ದಿಪಕ್ ಪರುಶರಾಮ್ ಗೋವಿಂದಕರ್ (28)ರನ್ನು ಬಾಗಲಕೋಟೆ ಜಿಲ್ಲೆಯ ನವನಗರ ಪೊಲೀಸರು ಬಂಧಿಸಿದ್ದರು.
2008ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನಡೆದ ಹುಬ್ಬಳ್ಳಿ-ಧಾರವಾಡ ನ್ಯಾಯಾಲಯ ಸ್ಫೋಟ ಪ್ರಕರಣದಲ್ಲಿ ಪ್ರಮುಖ ವ್ಯಕ್ತಿಗಳ ಕೈವಾಡವಿದೆ ಎಂದು ಹೇಳಲಾಗಿತ್ತು. ಬಂಧನದ ನಂತರ ಜಾಮೀನು ಕೊಡಿಸಲು ತಾವು ನಂಬಿಕೊಂಡಿರುವ ಮುಖಂಡರು ನೆರವಾಗಲಿಲ್ಲ ಎಂಬ ಅಸಮಾಧಾನದಿಂದ ಕುದಿಯುತ್ತಿದ್ದ ನಾಗರಾಜ ಜಂಬಗಿ ನ್ಯಾಯಾಲಯದ ವಿಚಾರಣೆ ವೇಳೆ ಬಾಂಬ್ ಸ್ಫೋಟಕ್ಕೆ ಪ್ರೇರಣೆ ನೀಡಿದ ಪ್ರಮುಖರೆಲ್ಲರ ಹೆಸರನ್ನು ಬಹಿರಂಗ ಪಡಿಸುವುದಾಗಿ ಎಚ್ಚರಿಕೆ ನೀಡಿದ್ದ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಜಂಬಗಿಯ ಸಹಚರರಿಂದಲೇ ಜೈಲಿನಲ್ಲಿ ಹಲ್ಲೆ ನಡೆಸಿ ಹತ್ಯೆ ಮಾಡುವ ಯತ್ನ ನಡೆದಿತ್ತು ಅದು ಯಶಸ್ವಿಯೂ ಆಯಿತು ಎಂದು ಮೂಲಗಳು ಶಂಕಿಸಿವೆ.
ಜಂಬಗಿಯ ಸಾವಿನೊಂದಿಗೇ ಬಾಂಬ ಸ್ಫೋಟದ ಗಂಭೀರ ಸತ್ಯಗಳು ನೆಪಥ್ಯಕ್ಕೆ ಸರಿದಂತಾಗಿದೆ ಎಂದು ಹೇಳಲಾಗಿದೆ.
ಕೃಪೆಃ ವಾರ್ತಾಭಾರತಿ.
1 comment:
Post a Comment