ಎಲ್ ಟಿ ಟಿ ಇ ಪ್ರಭಾಕರನ್ ಪಕ್ಕದಲ್ಲಿ ಯಡಿಯೂರಪ್ಪ
ಪ್ರತ್ಯೇಕ ತಮಿಳುರಾಷ್ಟ್ರಕ್ಕಾಗಿ ಹೋರಾಟ ನಡೆಸಿ, ಶ್ರೀಲಂಕಾ ಸೇನಾ ಕಾರ್ಯಚರಣೆಯಲ್ಲಿ ಮೃತಪಟ್ಟರೆಂದು ಹೇಳಲಾದ ಎಲ್‌ಟಿಟಿಇ ನಾಯಕ ಪ್ರಭಾಕರನ್ ಭಾವಚಿತ್ರದೊಂದಿಗೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನ ಭಾವಚಿತ್ರವನ್ನು ಮುದ್ರಿಸಿರುವ ಬ್ಯಾನರ್ ವೊಂದು ಇತ್ತೀಚೆಗೆ ನಡೆದ ತಿರುವಳ್ವರ್ ಪ್ರತಿಮೆ ಅನಾವರಣದಲ್ಲಿ ಎಲ್ಲರ ಗಮನ ಸೆಳೆಯಿತು.ಕಾರ್ಯಕ್ರಮ ನಡೆಯುತ್ತಿದ್ದ ಬೆಂಗಳೂರಿನ ಹಲಸೂರು ಕೆರೆ ಸಮೀಪದ ಮೈದಾನದಿಂದ ಸ್ವಲ್ಪದೂರದಲ್ಲಿನ ಲಾವಣ್ಯ ಥಿಯೆಟರ್ ಬಳಿ ಮರವೊಂದಕ್ಕೆ ಕಟ್ಟಲಾಗಿದ್ದ ಪ್ಲೆಕ್ಷ್ ನಿಂದ ತಯಾರಿಸಿದ ಈ ಬ್ಯಾನರ್ ನಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕ್ ರ್, ತಮಿಳುನಾಡಿನ ದಾರ್ಶನಿಕ ಪೆರಿಯಾರ್, ಸ್ವಾತಂತ್ರ ಸೇನಾನಿ ಶುಭಾಷ್ ಚಂದ್ರಬೋಸ್, ಕ್ಯೂಬಾ ಕಾಂತ್ರಿಯ ನೇತಾರ ಚೆ-ಗುವಾರ, ಎಲ್‌ಟಿಟಿಇ ನಾಯಕ ವೇಟ್ಟು ಪಿಳೈಪ್ರಭಕರನ್‌ರ ಭಾವಚಿತ್ರಗಳನ್ನು ಮೊದಲ ಸಾಲಿನಲ್ಲಿ ಹಾಕಲಾಗಿತ್ತು. ಕೆಳಗಿನ ಸಾಲಿನಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಖ್ಯಾತನಟ ಎಂ.ಜಿ.ರಾಮಚಂದ್ರನ್‌ರ ಭಾವಚಿತ್ರದ ಪಕ್ಕ ಕರ್ನಾಟಕದ ಮುಖ್ಯಮಂತಾರಿ ಯಡಿಯೂರಪ್ಪನವರ ಫೋಟೋವನ್ನು ಮುದ್ರಿಸಲಾಗಿತ್ತು.
ಬ್ಯಾನರ್ ನಲ್ಲಿ ಜನಶಕ್ತಿ ಎಂಬ ತಲೆಬರಹವಿದ್ದು ಮಾತ್ರವಿದ್ದು ಯಾವುದೇ ಸಂಘಟನೆಯ ಹೆಸರು ಇರಲಿಲ್ಲ. ಕೆಳಗೆ ‘ಭಾಷೆ, ಜಾತಿ, ಮತ ಭಾವನೆಯಿಲ್ಲದೆ ತಾನು ಭಾರತೀಯನೆಂದು ನಿರೂಪಿಸಿದ ಭಾರತೀಯ !! ಮಾನ್ಯ ಶ್ರೀ ಯಡಿಯೂರಪ್ಪನವರಿಗೆ ವಿಶ್ವದ ತಮಿಳು ಜನಾಂಗದ ಹಾರ್ಧಿಕ ಅಭಿನಂದನೆಗಳು’ ಎಂದು ಪ್ರಶಂಸಿಸಲಾಗಿತ್ತು.
ನೆರೆಯ ಶ್ರೀಲಂಕ ಸರಕಾರದಿಂದ ಘೋಷಿತ ಅಪರಾಧಿಯಾಗಿ ಸೇನಾ ಕಾರ್ಯಚರಣೆಯಿಂದ ಸಾವನ್ನಪ್ಪಿದ್ದಾರೆ ಎಂದು ನಂಬಲಾದ ಪ್ರಭಾಕರನ್ ಭಾವಚಿತ್ರದ ಕೆಳಗೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪ್ರಶಂಸಿಸಲಾಗಿದೆ. ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸುವ ಮಾರ್ಗದಲ್ಲಿಯೇ ಈ ಬ್ಯಾನರ್ ಕಟ್ಟಲಾಗಿತ್ತು. ಸಮೀಪದಲ್ಲೇ ಪೊಲೀಸ್ ಅಧಿಕಾರಿಗಳು ಬಂದೋಬಸ್ತಗೆ ನಿಂತಿದ್ದರು.

No comments:
Post a Comment